ಪತಿಯ ಇಬ್ಬರು ಪತ್ನಿಯರು ಕಣಕ್ಕೆ ಅಕ್ಕನಿಗಿಂತ ತಂಗಿ ಮೇಲುಗೈ

ಶಹಾಪುರ:ಡಿ.31:ತಾಲೂಕಿನ ದೊರನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಬೆವಿನಳ್ಳಿ ಗ್ರಾಮ ವಾರ್ಡ 11ರಲ್ಲಿ ಓರ್ವ ಪತಿಯ ಇಬ್ಬರ ಹೆಂಡತಿಯರು ಕಣದಲ್ಲಿದ್ದು. ಅಕ್ಕಗಿಂತ ತಂಗಿ ಮೇಲುಗೈ ಸಾಧಿಸಿದ ಅಪರೂಪ ಸಂಗತಿ ನಡೆಯಿತು. ಲಕ್ಷ್ಮಣ ಹೊಸಮನಿ ಎನ್ನವರ ಇಬ್ಬರ ಪತ್ನಿಯರಾದ ಭಾಗಮ್ಮ ಗಂ ಲಕ್ಷ್ಮಣ್ಣ ಮತ್ತು ತಂಗಿ ಭೀಮಬಾಯಿ ಗಂ ಲಕ್ಷ್ಮಣ ಹೊಸಮನಿ ಇಬ್ಬರು ಒಂದೆ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ತಿವೃ ಪೈಪೊಟಿಯಲ್ಲಿ ಚುನಾವಣೆ ನಡೆದಿತ್ತು. ಮತ ಏಣಕೆ ಸಂಧರ್ಭದಲ್ಲಿ ಅಕ್ಕ ಭಾಗಮ್ಮಗಿಂತ ತಂಗಿ ಭೀಮಬಾಯಿ 85 ಮತಗಳ ಹಂತರದಿಂದ ಜಯಸಾಧಿಸಿದ್ದಾರೆ. ಅಕ್ಕ ಭಾಗಮ್ಮ ಪರವಾಗಿ ಹಿರಿಯ ಮಗ ಬೆಂಬಲಿಸಿದರೆ. ಭೀಮಬಾಯಿಗೆ ಪತಿ ಲಕ್ಷ್ಮಣ ಬೆಂಬಲಕ್ಕೆ ನಿಂತು ತುರುಸಿನ ಮತದಾನ ಎರ್ಪಟ್ಟಿತ್ತು. ಇದರಲ್ಲಿ ತಂಗಿ ವಿಜಯತರಾಗಿದ್ದು ವಿಶೇಷವಾಗಿದೆ.