ಪತಿಯ ಆಸೆಗಳನ್ನು ನೆರವೇರಿಸಲು ರಾಜಕೀಯಕ್ಕೆ ಬರುವೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.14- ನನ್ನ ಪತಿ ಕೆ. ಶಿವರಾಮ್ ಅವರು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಜನ ಸೇವೆ ಮಾಡುವ ಹಂಬಲ ಹೊಂದಿದ್ದರು. ಹಾಗಾಗಿ, ಅವರ ಆಸೆ, ಗುರಿಯನ್ನು ಈಡೇರಿಸಲು ಹಠ, ಛಲದಿಂದ ರಾಜಕೀಯಕ್ಕೆ ಬರುವುದಾಗಿ ವಾಣಿ ಕೆ. ಶಿವರಾಂ ಘೋಷಣೆ ಮಾಡಿದರು.
ಚಾಮರಾಜನಗರದ ಡಾ. ರಾಜ್‍ಕುಮಾರ್ ಕಲಾಮಂದಿರದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಕೆ. ಶಿವರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತಿಯ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿ ಅವರು ಮಾತನಾಡಿದರು.
ಹತ್ತು ವರ್ಷಗಳಿಂದ ಅವರಿಗೆ ರಾಜಕಾರಣದಲ್ಲಿ ಬಹಳಷ್ಟು ನಿರಾಶೆಯಾಗಿತ್ತು. ಪ್ರತಿ ಬಾರಿಯು ಟಿಕೆಟ್ ಕೈ ತಪ್ಪಿತ್ತು. ಅವರು ಈ ಬಾರಿ ನಾನು ಗೆದ್ದು ಸಂಸದನಾಗುತ್ತೇನೆ ಎಂಬ ಕನಸು ಕಟ್ಟಿಕೊಂಡಿದ್ದರು. ಜನ ಸೇವೆ ಮಾಡುವ ಆಸೆಯನ್ನುಟ್ಟು ಕೊಂಡಿದ್ದರು. ಟಿಕೆಟ್ ಕೈ ತಪ್ಪಿದಾಗಲು ಬೇಸರಗೊಳ್ಳದೇ ಪಕ್ಷದ ನಿμÉ್ಠಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಆದರೆ ಯಾವುದೇ ಪಕ್ಷಗಳು ಅವರನ್ನು ಗುರುತಿಸಿರುವುದು ವಿμÁದಕರ ಎಂದು ಬೇಸರ ಹೊರಹಾಕಿದರು.
ಯಾವುದೇ ಪಕ್ಷಕ್ಕೆ ಹೋದರೂ ಸಿದ್ದಾಂತವನ್ನು ಬಿಟ್ಟು ಹೋದವರಲ್ಲ. ಅವರ ಬಹಳ ಕಷ್ಟು ಪಟ್ಟುಜನ ಸೇವೆ ಮಾಡಲುಛಲವಾದಿ ಮಹಾಸಭಾ ಸಂಘಟನೆಯನ್ನು ಸ್ಥಾಪನೆ ಮಾಡಿದ್ದರು. ಇದನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ನಿಮ್ಮೊಂದಿಗೆ ನಾನು ಸದಾಇರುತ್ತೇನೆ. ಎಲ್ಲರು ಸೇರಿ ಅವರನ್ನು ಜೀವಂತವಾಗಿಡುವ ಕೆಲಸವನ್ನು ಮಾಡೋಣ ಎಂದರು.
ನನಗೆ ರಾಜಕೀಯ ಶಕ್ತಿ ತುಂಬಿ: ಚಾಮರಾಜನಗರ ಲೋಕಸಭಾಕ್ಷೇತ್ರದ ವ್ಯಾಪ್ತಿಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುತ್ತಿದ್ದಾರೆ. ಬೆಂಗಳೂರಿನಿಂದ ಹೊರಟು ಊಟ, ತಿಂಡಿಯನ್ನು ಬಿಟ್ಟು ನಗರಕ್ಕೆ ಬರುತ್ತಿದ್ದರು. ರಾಜಕೀಯ ಅಧಿಕಾರ ಇದ್ದರೆ, ಮಾತ್ರಜನ ಸೇವೆ ಮಾಡಲು ಸಾಧ್ಯ ಎಂಬ ಸತ್ಯವನ್ನು ಎಲ್ಲರು ಅರಿತು ಕೊಳ್ಳಬೇಕು. ಶಿವರಾಂ ಅವರಿಗೆ ಬಹಳ ಅನ್ಯಾಯವಾಗಿದೆ. ಆ ಅನ್ಯಾಯವನ್ನು ಸರಿಪಡಿಸಲು ನಾನು ಮನೆಯಲ್ಲಿ ಕೂರದೇ, ನಿಮ್ಮೊಂದಿಗೆ ಇರುತ್ತೇನೆ. ನಮ್ಮ ಯಜಮಾನರ ಆಸೆ, ಗುರಿಯನ್ನು ನೆರವೇರಿಸಲು ರಾಜಕೀಯ ಬರುತ್ತೇನೆ. ಹೀಗಾಗಿ ನನಗೊಂದು ಅವಕಾಶ ಕೊಡಿ. ನನಗೆ ರಾಜಕೀಯ ಶಕ್ತಿಯನ್ನು ತುಂಬುವ ಮೂಲಕ ಅವರನ್ನು ಜೀವಂತವಾಗಿ ಉಳಿಸಿಕೊಡಿ ಎಂದು ವಾಣಿ ಭಾವುಕರಾದರು.
ಚಿತ್ರದುರ್ಗದ ಛಲವಾದಿ ಮಠಾಧ್ಯಕ್ಷ ಛಲವಾದಿ ಬಸವನಾಗಿಸ್ವಾಮೀಜಿ, ತಿ.ನರಸೀಪುರದ ಬುದ್ದ ವಿಹಾರದ ಬೋಧಿರತ್ನ ಬಂತೇಜಿಛಲವಾದಿ ಮಹಾಸಭಾದ ಅಧ್ಯಕ್ಷ ಅಣಗಳ್ಳಿ ಬಸವರಾಜು ಇದ್ದರು.