
ಕೋಲಾರ, ಮಾ.೬- ಕುಟುಂಬದ ಕಲಹದ ಹಿನ್ನಲೆಯಲ್ಲಿ ಪತಿಯೇ ತನ್ನ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದುರ್ಘಟನೆ ಬಂಗಾರಪೇಟೆಯ ಅಮರಾವತಿ ಬಡಾವಣೆಯಲ್ಲಿ ಇಂದು ಸಂಭವಿಸಿದೆ. ಹತ್ಯೆಗೆ ಒಳಗಾಗಿರುವ ಮಹಿಳೆಯು ನಂದಿನಿ (೩೪) ಎಂಬುವರಾಗಿದ್ದು, ಪತಿ ನಾಗರಾಜ್(೪೫) ಎಂಬಾತ ಚಾಕುವಿನಿಂದ ಇರಿದ ಹಿನ್ನಲೆಯಲ್ಲಿ ತೀವ್ರವಾದ ಗಾಯದಿಂದ ರಕ್ತಸ್ರಾವಗೊಂಡು ಮನೆಯಲ್ಲೆ ಸಾವನ್ನಾಪ್ಪಿದ್ದಾರೆ. ತಡ ರಾತ್ರಿ ಮನೆಯಲ್ಲಿ ಪತಿ ಮತ್ತು ಪತ್ನಿಯ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ನಾಗರಾಜ್ ಚಾಕುವಿನಿಂದ ಪತ್ನಿ ನಂದಿನಿಗೆ ಇರಿದು ಹತ್ಯೆ ಮಾಡಿದ ನಂತರ ಪೊಲೀಸ್ ಠಾಣೆಗೆ ತೆರಳಿ ತಾನು ಪತ್ನಿಗೆ ಅವೇಶದಲ್ಲಿ ಚಾಕುವಿನಿಂದ ತಿವಿದಾಗ ಅಕೆ ಮೃತ ಪಟ್ಟಿದ್ದಾಳೆ ಎಂದು ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಹಾಗೂ ಡಿ.ವೈ.ಎಸ್.ಪಿ. ಭೇಟಿ ನೀಡಿ ಪರಿಶೀಲಿಸಿದರು.