ಪತಂಜಲಿ ಸಮಿತಿ ಯಿಂದ ಶ್ರೀ ರಾಮನವಮಿ


ಸಂಜೆವಾಣಿ ವಾರ್ತೆ
ಹೊಸಪೇಟೆ: ನಾವು ಮಾಡುವ ಕೆಲಸಗಳ ನಮ್ಮ ಕರ್ಮಫಲಗಳಾಗಿ ಹಿಂಬಾಲಿಸಲಿದ್ದು ಉತ್ತಮಕಾರ್ಯಗಳತ್ತ ಮುಖ ಮಾಡಲೇಬೇಕು ಎಂದು ಶಾರದಾಶ್ರಮದ ಮಾತಾ ಪ್ರಮೋದಾಮಾಯಿ ತಿಳಿಸಿದರು.
ಹೊಸಪೇಟೆಯಲ್ಲಿ ಪತಂಜಲಿ ಯೋಗ ಸಮಿತಿ ವಿವಿಧ ಯೋಗ ಕೇಂದ್ರಗಳ ಸಹಕಾರದಲ್ಲಿ ನೆಹರೂ ಕಾಲೋನಿಯ ಬಲ್ಡೋಟಾ ಉದ್ಯಾನವನದಲ್ಲಿ ಹಮ್ಮಿಕೊಂಡ ಶ್ರೀ ರಾಮನವಮಿ ಹಾಗೂ ಬಾಬಾ ರಾಮದೇವ ಮಹಾರಾಜರ ಸನ್ಯಾಸತ್ವಪಡೆದ ದಿನಾಚರಾಣೆಯ ಕಾರ್ಯಕ್ರಮದಲ್ಲಿ ಮಾತನಾಡಿ   ಶ್ರೀ ರಾಮನ ನಡೆ, ನುಡಿ, ಆದರ್ಶಗಳ ಮೂಲಕ ಇಂದಿಗೂ ಪೂಜ್ಯನೀಯರಾಗಿದ್ದು ಉತ್ತಮ ಬೀಜ ಬಿತ್ತಿದರೆ ಉತ್ತಮಬೆಳೆ ಎಂಬಂತೆ ಉತ್ತಮ ಕಾರ್ಯಗಳು ಉತ್ತಮ ಫಲ ನೀಡುವುದರಿಂದ  ಆದರ್ಶಮಾನವಾಗಿ ಬೆಳಯಬೇಕು ಸದಾ ಸ್ಮರಣೀಯರಾಗಿರಬೇಕು ಎಂದರು.
ಯಾವುದೆ ಆರ್ಥಿಕ ಹೊರೆಲ್ಲದೆ ಸ್ವಾಸ್ಥ ದೇಹ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಿರುವ ಬಾಬಾ ರಾಮದೇವ ಮಾರ್ಗದರ್ಶನ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಕಿರಣ್, ಡಾ.ಎಫ್.ಟಿ.ಹಳ್ಳಿಕೇರಿ, ದ್ರಾಕ್ಷಾಯಿಣಿ ಶಿವಕುಮಾರ, ಉಮಾ ವಿಶ್ವನಾಥ, ಕಟ್ಟಾ ಸುಬ್ರಹ್ಮಣ್ಯ,  ಮಲ್ಲಿಕಾರ್ಜುನ, ಶ್ರೀನಿವಾಸರಾವ್, ಜಿ.ಎಸ್.ಕೋಯ್ಲಿ ಸೇರಿದಂತೆ ಇತರೆ ಯೋಗಸಾಧಕರು ಹಾಜರಿದ್ದರು.