ಪತಂಜಲಿ ಯೋಗ ಸಮಿತಿ


ಹೊಸಪೇಟೆ, ನ.02: ಪತಂಜಲಿ ಯೋಗ ಸಮಿತಿ ಫ್ರೀಡಂ ಪಾರ್ಕ್‍ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿತು. ನಾಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಹೆಸರಾತ ಪತಂಜಲಿ ಪರಿವಾರದ ಗಾಯಕಿಯರಾದ ನಾಗರತ್ನಾ, ಸುಜಾತಾ, ನಿವೃತ್ತ ಸೈನಿಕ ಹಾಗೂ ಹಿರಿಯ ಯೋಗಸಾಧಕ ಅಶೋಕ ಚಿತ್ರಗಾರ, ಕೇಂದ್ರ ಸಂಚಾಲಕ ಶ್ರೀರಾಮ, ವೀರಣ್ಣ ಸೇರಿದಂತೆ ಅನೇಕರು ಕನ್ನಡ ಭಕ್ತಿಗೀತೆಗಳ ಮೂಲಕ ರಾಜ್ಯೋತ್ಸವವನ್ನು ಆಚರಿಸಿದರು.
ಕನ್ನಡ ನಾಡು ನುಡಿ, ನೆಲ, ಜಲಗಳ ರಕ್ಷಣೆಗೆ ಆಮೂಲಕ ಸಾಂಸ್ಕೃತಿ ಪರಂಪರೆಯ ಗೌರವ ಎತ್ತಿಹಿಡಿಯುವ ಮೂಲಕ ರಾಷ್ಟ್ರದ ಐಕ್ಯತೆಗೆ ಶ್ರಮಿಸುವಂತೆ ನಾಡ ಗೌರವ ಕಾಪಾಡಲು ಮುಂದಾಗಲು ಕರೆ ನೀಡುವ ಮೂಲಕ ಅಶೋಕ ಚಿತ್ರಗಾರ ಕರೆ ನೀಡಿದರು.
ಕೇಂದ್ರದ ಪ್ರಮುಖರಾದ ಅನಂತ ಜೋಶಿ, ಮಾರುತಿ ಪೂಜಾರ, ಶೈಲಜಾ ಕಳಕಪ್ಪ, ಸಿದ್ಧರಾಮಪ್ಪ, ರಾಮಚಂದ್ರ, ಚಂದ್ರಿಕಾಶ್ರೀರಾಮ,