ಪತಂಜಲಿ ಯೋಗ ಸಮಿತಿ ಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ.


ಸಂಜೆವಾಣಿ ವಾರ್ತೆ
ಹೊಸಪೇಟೆ ಏ14: ಸಂವಿಧಾನ ಶಿಲ್ಪಿ ಬಾಬಾಫಫಫಫ ಸಾಹೇಬ್ ಅಂಬೇಡ್ಕರ್ 132 ಜಯಂತಿಯನ್ನು ಪತಂಜಲಿ ಯೋಗ ಸಮಿತಿ ಯಿಂದ ಆಚರಿಸಲಾಯಿತು.
ಹೊಸಪೇಟೆಯ ವಡಕರಾಯಸ್ವಾಮಿ ದೇವಸ್ಥಾನದಲ್ಲಿ ದೈನಂದಿನ ಯೋಗ ಕಕ್ಷೆಯ ನಂತರ ಎಲ್ಲಕೇಂದ್ರಗಳ ಯೋಗ ಸಾಧಕರೊಂದಿಗೆ ರಾಷ್ಟ್ರನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಸಾಧನೆ,  ಜ್ಞಾನ ಕುರಿತು ಪತಂಜಲಿ ಯೋಗ ಸಮಿತಿಯ ಡಾ.ಎಫ್ ಹಳ್ಳಿಕೇರಿ ಮಾತನಾಡಿ
ಕಿರಣ್, ಶಿಕ್ಷಣ ಸಂಘಟನೆ ಹೋರಾಟ ದ ಮೂಲಕ ಜಗತ್ತಿನಾದ್ಯಂತ ಹೆಸರಾದವರು, ಅವರ ನೇತ್ರತ್ವದಲ್ಲಿ ರಚನೆಯಾದ ಸಂವಿಧಾನ ಇಂದು ನಮ್ಮ ಸ್ವಾಯತ್ತತೆಗೆ ಕಾರಣವಾಗಿದ್ದು ಇದರ ಮೌಲ್ಯವನ್ನು ಎತ್ತಿಹಿಡಿಯಬೇಕಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಕಿರಣ್,  ವಡಕರಾಯ ದೇವಸ್ಥಾನದ ಯೋಗ ಕೇಂದ್ರದ ಪ್ರಭಾರಿ ಲಲಿತಾ ಪಾಟೀಲ್ ಹಾಗೂ ಯೋಗಸಾಧಕ ಜಯಣ್ಣ ಹಾಜರಿದ್ದು ಅಂಬೇಡ್ಕರ್ ಗೀತಗಾಯನದೊಂದಿಗೆ ತಮ್ಮ ನಮನ ಸಲ್ಲಿಸಿದರು.
ಹಿರಿಯ ಯೋಗ ಸಾಧಕರಾದ ಅಶೋಕ ಚಿತ್ರಗಾರ,  ಯರ್ರಿಯಪ್ಪ, ರೇಣುಕಾ ಪಾಟೀಲ್, ಮಲ್ಲಿಕಾರ್ಜುನ, ವಿಠೋಬಣ್ಣ, ಡಾ.ರಾಜಶೇಖರ, ಶ್ರೀರಾಮ ಚಂದ್ರಿಕಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.