ಪತಂಜಲಿ ಯೋಗ ಸಮಿತಿ ಯಿಂದ ಬಲಿದಾನ ದಿವಸ್ರಾಷ್ಟ್ರದ ವಿಷಯಕ್ಕೆ  ಪ್ರತಿಯೊಬ್ಬರು ಧ್ವನಿಯಾಗಬೇಕು.


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ23: ರಾಷ್ಟ್ರದ ವಿಷಯ ಸರ್ವ ವ್ಯಾಪಿಯಾಗಿದ್ದು ನಮಗೆಕೆ ಬೇಕು ಎಂದು ಸುಮ್ಮನಿರದೆ ಅದನ್ನು ಪ್ರಶ್ನಿಸುವ ಹಾಗೂ ಸರಿಯಾಗಿದ್ದಾಗ ಧ್ವನಿಯಾಗುವ ಮೂಲಕ ದೇಶದ ಘನತೆಯನ್ನು ಎತ್ತಿಹಿಡುಯುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಯುವ ಬ್ರೀಗೆಡ್ ನ ಪಾಂಡುರಂಗ ಅಭಿಪ್ರಾಯಪಟ್ಟರು.
ಹೊಸಪೇಟೆಯ ಶ್ರೀರಾಮುಲು ಪಾರ್ಕ್ ನಲ್ಲಿ ಪತಂಜಲಿ ಯೋಗ ಸಮಿತಿ ಶ್ರೀರಾಮುಲು ಪಾರ್ಕ್ ಯೋಗ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡ ಸ್ವತಂತ್ರ್ಯ ಹೋರಾಟಗಾರರಾದ ರಾಜಗುರು, ಭಗತ್ ಸಿಂಗ್, ಸುಖದೇವ ಬಲಿದಾನದ ನೆನಪಿಗಾಗಿ ಹಮ್ಮಿಕೊಂಡ ಬಲಿದಾನದೀವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಶಾಂತಿ ಹಾಗೂ ಕಾಂತ್ರಿಯ ಹಾದಿಯಲ್ಲಿ ಹೋರಾಟ ನಡೆಯದಿದ್ದರೆ ಸ್ವಾತಂತ್ರ್ಯ ಬರುವುದು ಸುಲಭವಾಗಿರಲಿಲ್ಲಾ, ಈ ಕಾರಣಕ್ಕಾಗಿಯೇ ಅನೇಕರು  ಇಂದಿಗೂ ನೆನಪಿನಲ್ಲಿರುವಂತಾಗಿದೆ ಸ್ವಾತಂತ್ರ್ಯ ನಂತರವೂ ನಾವು ಇಂದು ಅನ್ಯಾಯವನ್ನು ವಿರೋಧಿಸುವ ನ್ಯಾಯಕ್ಕಾಗಿ ಧ್ವನಿಗೂಡಿಸುವ ಮೂಲಕವೂ ದೇಶದ ಪ್ರಗತಿಗೆ ಅಣಿಯಾಗಬೇಕಿದೆ ಅಂದಾಗ ಮಾತ್ರ ನಾವು ನಮ್ಮ ಸ್ವಾತಂತ್ರ್ಯಕ್ಕೆ ತ್ಯಾಗ ಮಾಡಿದವರಿಗೆ ನೀಡುವ ನಿಜವಾದ ಗೌರವವಾಗಲಿದೆ ಎಂದರು.
ರಾಜ್ಯ ಸಮಿತಿಯ ಬಾಲಚಂದ್ರ ಶರ್ಮಾ .
ರಾಘವೇಂದ್ರ ಪರಗಿ ಪ್ರಾಸ್ತಾವಿಕವಾಗಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಪಿ.ಡಿ.ವಿನಾಯಕ  ಮಾತನಾಡಿದರು. ಅಮೃತ ಪೈ ದೇಶ ಭಕ್ತಿಗೀತೆ ಹಾಡಿದರು,
ರಾಜ್ಯ ಯುವ ಪ್ರಭಾರಿ ಕಿಣಕುಮಾರ,  ರಾಜೇಶ ಕರ್ವಾ, ಭೂಪಾಳ ರಾಘವೇಂದ್ರ ಶೆಟ್ಟಿ, ಮಂಗಳಕ್ಕ, ಅನಂತ ಜೋಶಿ, ಡಾ.ರಾಜಶೇಖರ, ಡಾ.ಸುಮಂಗಳಮ್ಮ, ಕಟ್ಟಾ ನಂಜಪ್ಪ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹೊಸಪೇಟೆಯ ವಿವಿಧ ಯೋಗ ಕೇಂದ್ರದ ಸಂಚಾಲಕರು, ಯೋಗಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.