ಪತಂಜಲಿ ಯೋಗ ಶಿಬಿರ ದಲ್ಲಿ ಮತದಾನ ಅರಿವು

ಗುರುಮಠಕಲ್:ಎ.14: ಪತಂಜಲಿ ಯೋಗ ಶಿಬಿರ ಗುರುಮಠಕಲ್ ದಲ್ಲಿ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ಪಟ್ಟಣದ ಸಾರ್ವಜನಿಕ ಉದ್ಯಾನವನ ಲಕ್ಷ್ಮಿ ನಗರದ ಗುರುಮಠಕಲದಲ್ಲಿ
ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್. ಎಸ್. ಖಾದ್ರೋಳ್ಳಿ ತಾಲೂಕು ಪಂಚಾಯತ್ ಗುರುಮಠಕಲ್ ರವರ ನೇತೃತ್ವದಲ್ಲಿ

ಜಿಲ್ಲಾ ಮತ್ತು ತಾಲೂಕು ಮುಖ್ಯ ಯೋಗ ಶಿಕ್ಷಕರಾದ ಸಂತೋಷ ಕುಮಾರ್ ನವದಿ ಇವರ ಮಾರ್ಗದರ್ಶನದಲ್ಲಿ ನಡೆಯುವ ಯೋಗ ಶಿಬಿರದಲ್ಲಿ ನಡೆಯುವ ಯೋಗ ಕ್ಲಾಸ್ ದಲ್ಲಿ ಹಾಜರಿದ್ದ ಯೋಗ ಪಟುಗಳಿಗೆ ತಾಲೂಕು ಸ್ವೀಪ್ ವತಿಯಿಂದ ಮತದಾನದ ಅರಿವು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಹಾಗೂ ಪುರಸಭೆ ಮುಖ್ಯಧಿಕಾರಿಗಳು ಭಾರತಿ ಎಸ್ ದಂಡೋತಿ. ಗುರಮಠಕಲ್ ಸಹಾಯಕ ನಿರ್ದೇಶಕರು . ತಾಲೂಕ ಪಂಚಾಯತ್ ಮತ್ತು ತಾಂತ್ರಿಕ ಸಹಾಯಕರು ತಾಲೂಕು ಪಂಚಾಯತ್ ಸಿಂಬದಿಗಳು ಮತ್ತು ಸ್ವೀಪ್ ಜಿಲ್ಲಾ ಮಾಸ್ಟರ್ ತರಬೇತಿದಾರರು ಹಾಗೂ ತಾಲೂಕು ನೌಕರರ ಸಂಘದ ಅಧ್ಯಕ್ಷರು, ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಘದ ಅಧ್ಯಕ್ಷರು ಮಾತನಾಡಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಿಬ್ಬಂದಿಗಳು , ಸ್ಥಳೀಯ ಶಿಕ್ಷಕರು ಸದ್ರಿ ಸ್ವೀಪ್ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.