ಪತಂಜಲಿ ಯೋಗ ಶಿಕ್ಷಣ ಸಮಿತಿ ವಸಂತ ಶಿಬಿರಕ್ಕೆ ಚಾಲನೆ

ಕೋಲಾರ,ಏ,೧೨:ಗಿಡವಾಗಿರುವಾಗ ಸಸ್ಯಕ್ಕೆ ಸರಿಯಾದ ರೀತಿ ಕಸಿ ಮಾಡಿದರೆ ಸುಧಾರಿತ ಫಸಲನ್ನು ನಿರೀಕ್ಷಿಸ ಬಹುದಾದ ರೀತಿಯಲ್ಲಿ, ಬಾಲ್ಯದಲ್ಲೇ ಮಗುವಿಗೆ ಸಂಸ್ಕಾರ ಭರಿತವಾದ ಅವಕಾಶ ಕಲ್ಪಿಸಿಕೊಟ್ಟರೆ ಸಮೃದ್ಧ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ನಾರಾಯಣಪ್ಪ ಅಭಿಪ್ರಾಯಪಟ್ಟರು.
ಮುಳಬಾಗಿಲು ನಗರದ ಅಮರ ಜ್ಯೋತಿ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ವಸಂತ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ,ಯೋಗ ಬಂಧು ಬಿ.ಎಂ.ಮುನಿರಾಮಯ್ಯ ಮಾತನಾಡಿ, ಸಮಿತಿಯು ತನ್ನ ಕಾರ್ಯ ಚಟುವಟಿಕೆಗಳನ್ನು ಆದಿ ದೈವಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕ ಅಂಶಗಳ ಮೇಲೆ ರೂಪಿಸಿದೆ, ಸಮಾಜದಲ್ಲಿ ಉತ್ತಮ ಆರೋಗ್ಯ, ಶಾಂತಿ ನೆಲಸಲು ಸಹಕರಿಸುತ್ತಿದೆ ಎಂದರು.
ಇಲ್ಲಿ ಉಚ್ಛರಿಸಲ್ಪಡುವ ಮಂತ್ರ, ಶ್ಲೋಕ, ದೇವರ ಸ್ಮರಣೆ ಗಳಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಧ್ಯಾನ, ಪ್ರಾಣಾಯಾಮಗಳಿಂದ ನಕಾರಾತ್ಮಕ ಧೋರಣೆ ದೂರವಾಗಿ, ಸಾವಯವ ತಿಂಡಿಗಳ ಸೇವನೆಯಿಂದ ಸಾತ್ವಿಕ ಮನೋಧೋರಣೆ ನಿರ್ಮಾಣವಾಗಿ, ಯೋಗ ಆಟಗಳಿಂದ ಮಕ್ಕಳಲ್ಲಿ ವಿವಿಧ ತಂತ್ರಗಳು ತಂಡದ ಕೆಲಸ ಜೊತೆಗೆ ಸಾಮೂಹಿಕ ಚಿಂತನೆ ಕಡೆ ಮನಸ್ಸು ವಾಲುತ್ತದೆ. ಅಲ್ಲದೆ ದಯೆ ಕರುಣೆ ಪ್ರೀತಿ ವಿಶ್ವಾಸ ಗೌರವ ಶಾಂತಿಯಂತಹ ಸಂಸ್ಕಾರಗಳಿಂದ ಮಾನಸಿಕ ಮೃದುತ್ವ ನಿರ್ಮಾಣವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಜೈಪಾಲ್ ಮಾತನಾಡಿದರು. ಸಮಿತಿಯ ನಿಯಮದಂತೆ ಕಾರ್ಯ ಚಟುವಟಿಕೆಗಳನ್ನು ಯೋಗ ಶಿಕ್ಷಕರಾದ ಪದ್ಮ ರವರು ಜೋಡಿಸಿಕೊಂಡರು. ನಿತ್ಯ ಅಭ್ಯಾಸಕ್ಕೆ ಬರುವ ೬೦ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗಿಯಾಗಿ ಸ್ವತ: ಕಾರ್ಯಕ್ರಮವನ್ನು ರೂಪಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಯೋಗ ಸಮಿತಿಯ ಅಕ್ಕಂದಿರು ಹಾಗೂ ಅಣ್ಣಂದಿರು ಉಪಸ್ಥಿತರಿದ್ದು, ಶಿಕ್ಷಣ ಪ್ರಮುಖರಾದ ಶ್ರೀನಿವಾಸ್ ಹಿರಿಯ ಯೋಗ ಬಂಧುಗಳಾದ ಸುರೇಶ್, ಒನಕಿರಿವೆಂಕಟರವಣಪ್ಪ, ಮುರಳಿ, ಗಾಯಿತ್ರಿ, ಚಂದ್ರಕಲಾ, ಸುಜಾತ, ವಸಂತ, ಲಾವಣ್ಯ, ಶಾಂತಿ, ಮುನಿವೆಂಕಟಪ್ಪ, ರಾಜಣ್ಣ, ರಾಜಗೋಪಾಲ್, ಅಶೋಕ್, ಪ್ರಮೀಳ, ನಾರಾಯಣಸ್ವಾಮಿ, ವರಲಕ್ಷ್ಮಿ, ಜ್ಯೋತಿ, ಹೇಮಾವತಿ, ಸಿತಾರ, ರಾಧಮ್ಮ ಮತ್ತಿತರರು ಭಾಗಿಯಾಗಿದ್ದರು.