ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಜೀವನ ದರ್ಶನ


ದಾವಣಗೆರೆ.ಜು.೧೮; ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಜು.೨೦ ರಿಂದ ೨೪ ರವರೆಗೆ ನಗರದ ಎಂಟು ಕಡೆ ಯೋಗ ಜೀವನ ದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಫೌಂಡೇಶನ್ ನ ಸಂಚಾಲಕ ಟಿ. ವಿ.ವಿ ಸತ್ಯನಾರಾಯಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಅಂತಾರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ ಪ್ರಶಿಕ್ಷಣ ಶಿಬಿರಗಳು ನಡೆಯಲಿದ್ದು ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ನಿಮಿಷಾಂಭ ಸಮುದಾಯ ಭವನ,  ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಮುದಾಯ ಭವನದಲ್ಲಿ ಶಿಬಿರಗಳು ಜರುಗಲಿದೆ.ಜು.೨೦ ರಂದು ಸಂಜೆ ೬ ಕ್ಕೆ ಏಕಕಾಲದಲ್ಲಿ ಎಲ್ಲಾ ಭಾಗದಲ್ಲಿ ಶಿಬಿರ ನಡೆಯಲಿದೆ. ಬಾಪೂಜಿ ಬ್ಯಾಂಕ್ ಸಮುದಾಯದಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ.ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಆಗಮಿಸಲಿದ್ದಾರೆ.ನಿಮಿಷಾಂಬ ಸಮುದಾಯ ಭವನದಲ್ಲಿ ಶಿಕ್ಷಣ ಪ್ರಮುಖ ಶಾಂತಾ ಕೃಷ್ಣರ್  ಆಗಮಿಸಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕಲ್ಲೇಶಣ್ಣ,ಗಿರೀಶಣ್ಣ,ಡಾ.ಶಂಕರಗೌಡ್ರು,ಬಾಲ ಸುಬ್ರಹ್ಮಣ್ಯ ಶಿವರುದ್ರಪ್ಪ, ಭಾಗವಹಿಸಲಿದ್ದಾರೆ.ಜು.೨೧ ರಂದು ಸಂಜೆ ೬ ರಿಂದ ಭಜನೆ ಮತ್ತು ಸತ್ಸಂಗ ನಡೆಯಲಿದೆ.ಜು.೨೨ ರಂದು ಸಂಜೆ ೬ ಕ್ಕೆ ಲಲಿತಾ ಸಹಸ್ರನಾಮ ಹಾಗೂ ಮಾತೃಭೋಜನ ನಡೆಯಲಿದೆ.ಜು.೨೪ ರ ಬೆಳಗ್ಗೆ ೧೧.೩೦ ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಟೀಕರಿಸುವ ಕಾರ್ಯವನ್ನು ಮಾಡುತ್ತಿರುವ ಸಂಘಟನೆಯಾಗಿದೆ.ದಾವಣಗೆರೆ ನಗರದಲ್ಲಿ ೨೦೦೮ ರಿಂದ ಪ್ರಾರಂಭವಾದ ಸಮಿತಿಯು ಅನೇಕ ಬಡಾವಣೆಯಲ್ಲಿ ೪೦ ಕ್ಕೂ ಹೆಚ್ಚು ಶಾಖೆಗಳ ಮೂಲಕ ನಾಗರೀಕರಿಗೆ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಾ ಬಂದಿದೆ .ಈಗಾಗಲೇ ೩೫೦ ಜನರು ನೊಂದಣಿ ಮಾಡಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಹೆಚ್ ಕಲ್ಲೇಶ್,ಲೀಲಾವತಿ, ಭಾರತಿ ಬಿ.ಎಸ್,ವೀರಭದ್ರಪ್ಪ,ರುದ್ರಪ್ಪ,ಆರ್ ಸಿದ್ದೇಶಪ್ಪ ಇದ್ದರು.