ಮಾನ್ವಿ,ಜೂ.೧೫-
ಪತಂಜಲಿ ಯೋಗ ಸಮಿತಿ ವತಿಯಿಂದ ಪಟ್ಟಣದ ಎಪಿಎಂಸಿ ಆವರಣವೊಂದರ ಮಳಿಗೆಯಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದಿನಿಂದ ಏಳು ದಿನಗಳವರೆಗೆ ಉಚಿತ ಯೋಗ ಹಾಗೂ ಪ್ರಾಣಾಯಾಮ ಶಿಬಿರ ನಡೆಯಲಿದ್ದು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯೋಗ ಶಿಕ್ಷಕರಾದ ಆನಂದ ಪತ್ತಾರ್ ಹಾಗೂ ಯೋಗ ಮಾರ್ಗದರ್ಶಕರಾದ ಕಿಶೋರ್ ಕುಮಾರ್ ಟಿಪ್ಪರಕರ್ ನೇತೃತ್ವದಲ್ಲಿ ಜೂ.೧೫ ರಿಂದ ಜೂ ೨೦ರವರೆಗೆ ಪ್ರತಿದಿನ ಬೆಳಿಗ್ಗೆ ೫.೩೦ ರಿಂದ ೭ ಗಂಟೆಯ ವರೆಗೆ ಯೋಗ ತರಬೇತಿ ಹಾಗೂ ಜೂ.೨೧ರಂದು ವಿಶ್ವ ಯೋಗದಿನವನ್ನು ಆಚಾರಿಸಲಾಗುವುದು ಆಸಕ್ತರು ಉಚಿತ ಯೋಗ ಹಾಗೂ ಪ್ರಾಣಾಯಾಮ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಪ.ಯೋ.ಸ.ತಾ.ಪ್ರಭಾರಿಗಳಾದ ಕುಮಾರಸ್ವಾಮಿ ಮೇದಾ ತಿಳಿಸಿದ್ದಾರೆ.