ಪತಂಗೆ ಜಯಂತರಾವ್,ಗೋವಿಂದ ರೆಡ್ಡಿ ಅವರಿಗೆ ಕೋಲಾರ ಶಾಸಕರಿಂದ ಸನ್ಮಾನ

ರಾಯಚೂರು, ಜು.೧೮- ಅತಿ ಹೆಚ್ಚು ರಸಗೊಬ್ಬರ ವಹಿವಾಟು ನಡೆಸಿದ ಹಿನ್ನಲೆ ರಾಯಚೂರು ಒಕ್ಕೂಲತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಘ ಅಧ್ಯಕ್ಷ ಪತಂಗೆ ಜಯಂತ ರಾವ್ ಹಾಗೂ ಉಪಾಧ್ಯಕ್ಷ ಗೋವಿಂದ ರೆಡ್ಡಿ ಇವರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಂ ಎನ್.ರಾಜೇಂದ್ರ ಹಾಗೂ ಕೋಲಾರ ಜಿಲ್ಲೆಯ ಶಾಸಕ ಶ್ರೀನಿವಾಸ್ ಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಜುಲೈ ೭ ರಂದು ಜರುಗಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ , ಬೆಂಗಳೂರು ಇದರ ವಾರ್ಷಿಕ ಮಹಾ ಸಭೆಯಲ್ಲಿ ೨೦೨೧-೨೨ ನೇ ಸಾಲಿನ ಕಲಬುರ್ಗಿ ವಿಭಾಗದ ಮಹಾಮಂಡಳದ ಸದಸ್ಯ ಸಂಘಗಳಲ್ಲಿ ಮಂಡಳದೊಂದಿಗೆ ಅತಿ ಹೆಚ್ಚು ರಸಗೊಬ್ಬರ ವಹಿವಾಟು ನಡೆಸಿದ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಘ ನಿರಾಯಚೂರು ಇದರ ಅಧ್ಯಕ್ಷರಾದ ಪತಂಗೆ ಜಯವಂತ ರಾವ್ ಮತ್ತು ಉಪಧ್ಯಕ್ಷರಾದ ಗೋವಿಂದ ರೆಡ್ಡಿಯವರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ.ಬೆಂಗಳೂರು ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಕೊಲಾರ ಜಿಲ್ಲೆಯ ಹಾಲಿ ಶಾಸಕ ಶ್ರೀನಿವಾಸಗೌಡ ರವರು ಸನ್ಮಾಸಿ ಗೌರವಿಸಿದರು.
ಸತತ ವರ್ಷಗಳಿಂದ ಅತಿ ಹೆಚ್ಚಿನ ಮಾಡುತ್ತ ಪ್ರಶಸ್ತಿಗೆ ಆಡಳಿತ ಮಂಡಳಿಯ ಸರ್ವ ಭಾಜನರಾಗುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು .
ಈ ಸಂಧರ್ಭದಲ್ಲಿ ಸಿಬ್ಬಂದಿ ವರ್ಗ ಮತ್ತು ಎಲ್ಲಾ ನಿರ್ದೇಶಕರು ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು , ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಸನ್ಮಾನವನ್ನು ಸ್ವೀಕರಿಸಿದ ಅಧ್ಯಕ್ಷ ಪತಂಗೆ ಮತ್ತು ಉಪಾಧ್ಯಕ್ಷ ಗೊವಿಂದ ರೆಡ್ಡಿಯವರಿಗೆ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ನಿರಾಯಚೂರು ಇದರ ಆಡಳಿತ ಮಂಡಲಿ ನಿರ್ದೇಶಕರು ಮತ್ತು ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.