ಪಡೆದ ಸಾಲ ಸ್ನೇಹಿತರು ಹಿಂದಿರುಗಿಸದಿದ್ದಕ್ಕೆ ನೊಂದ ಪಶುವೈದ್ಯ ಆತ್ಮಹತ್ಯೆ

ಬಾಗಲಕೋಟೆ,ಮಾ.15- ಕೊಟ್ಟ ಸಾಲವನ್ನು ಸ್ನೇಹಿತರು ವಾಪಸ್ ಹಿಂದಿರುಗಿಸಿಲ್ಲ ಎಂದು ಮನನೊಂದು ಪಶುವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ.
ಪಶುವೈದ್ಯ ನಂದೆಪ್ಪ ಬಾಗೇವಾಡಿ ಆತ್ಮಹತ್ಯೆ ಮಾಡಿಕೊಂಡವರು.
ಬನಹಟ್ಟಿ ತಾಲೂಕಿನ ಹಿಪ್ಪರಗಿ ನಿವಾಸಿಯಾಗಿರುವ ನಂದೆಪ್ಪ ಅವರು ತನ್ನ ಓರ್ವ ಸಹೋದ್ಯೋಗಿ ಪಶುವೈದ್ಯನಿಗೆ 5 ಲಕ್ಷ ರೂ ಹಾಗೂ ಮತ್ತೊಬ್ಬ ಗೆಳೆಯನಿಗೆ 7 ಲಕ್ಷ ರೂಪಾಯಿ ಸಾಲು ನೀಡಿದ್ದರು. ಆದರೆ ಸಾಲ ಹಿಂದಿರುಗಿಸದ ಹಿನ್ನಲೆಯಲ್ಲಿ ನೊಂದು ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದ್ದು, ಇದರಲ್ಲಿ ಸಾಲ ನೀಡಿದ್ದರ ಬಗ್ಗೆ ಉಲ್ಲೇಖಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಮಖಂಡಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.