ಪಡೆದ ಶಿಕ್ಷಣದಿಂದಲೇ ಬಾಬಾ ಸಾಹೇಬರು ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ಮಾ.06: ಡಾ. ಬಿ.ಆರ್ ಅಂಬೇಡ್ಕರ್ ರವರು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ರಚಿಸಲು ಅವರು ಕಷ್ಟಪಟ್ಟು ಕಲೆತ ಶಿಕ್ಷಣವೇ ಕಾರಣ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗೋರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಶ್ರೀಮತಿ ಇಂದಿರಾಗಾಂಧಿ ಮೆಮೋರಿಯಲ್ ಚೈಲ್ಡ್ರನ್ ಡೆಸ್ಟ್ರೀಟ್ಯೂಟ್ ಶಿಕ್ಷಣ ಸಂಸ್ಥೆಯ ಜ್ಞಾನೋದಯ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಪ್ರತಿಯೊಂದು ಊರುಗಳಲ್ಲಿ ದೊಡ್ಡ ದೊಡ್ಡ ಶಾಲೆಗಳಾಗುತ್ತಿವೆ. ನಮ್ಮ ಕಾಲದಲ್ಲೂ ಶಾಲೆಗಳು ಕಡಿಮೆ ಇದ್ದವು. ಇನ್ನೂ ಬಾಬಾ ಸಾಹೇಬರು ಹುಟ್ಟಿದಾಗ 130 ವರ್ಷಗಳ ಮೊದಲು ತಾಲೂಕಿಗೆ ಒಂದು ಹೈಸ್ಕೂಲ್ ಇರಲಿಲ್ಲ. ಅಂತಹ ದಿನಗಳಲ್ಲಿಯೇ ಅವರು ಓದಿ, ಬರೆದು ವಿದೇಶಗಳಿಂದ ಡಿಗ್ರಿ ಪಡೆದುಕೊಂಡಿದ್ದರು. ಅವರು ಇಡೀ ವಿಶ್ವದಲ್ಲೇ ದೊಡ್ಡಪ್ರಮಾಣದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಬರೆಯಲು ಅವರು ಪಡೆದುಕೊಂಡ ಶಿಕ್ಷಣವೇ ಕಾರಣ.

ನಾವೆಲ್ಲರೂ ಬಸವಣ್ಣನವರ ಕರ್ಮ ಭೂಮಿಯವರು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಈಗ 21ನೇ ಶತಮಾನದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕಾಗಿದೆ. ಶಿಕ್ಷಣ ಕ್ರಾಂತಿಯಾಗಲು ಎಲ್ಲರೂ ಓದಿ, ಬರೆದು ವಿದ್ಯಾವಂತರಾಗಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಕಂಡೆಪ್ಪ ಪಾತರಪಳ್ಳಿರವರು ಮಾತನಾಡಿ, ಪಾಲಕರು, ಪೆÇೀಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಮಯ ನೀಡಬೇಕು. ಅವರ ಬೇಕು ಬೇಡಗಳ ಬಗ್ಗೆ ಗಮನಹರಿಸಬೇಕು. ಮಕ್ಕಳನ್ನು ನಿರ್ಲಕ್ಷ್ಯ ಮಾಡುವುದು, ಭಯದ ವಾತವರಣ ಸೃಷ್ಟಿ ಮಾಡುವುದನ್ನು ಪೆÇೀಷಕರು ಬಿಡಬೇಕು. ಹಳ್ಳಿಗಳಲ್ಲಿ ಸಿಗುವ ಅತ್ಯುತ್ತಮ ಶಿಕ್ಷಣ ಸಿಟಿಗಳಲ್ಲಿ ಸಿಗಲಾರದು. ಇಂಗ್ಲಿಷ್ ಮಾಧ್ಯಮಕ್ಕಿಂತ ಕನ್ನಡ ಮಾಧ್ಯಮ ಶಿಕ್ಷಣ ಉತ್ತಮವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಂಚೋಳಿ ತಾಲೂಕಿನ ಶ್ರೀ ಕಾಳಿಕಾದೇವಿ ಆಶ್ರಮದ ಪೂಜ್ಯನಿಯ ಶ್ರೀ ಶ್ರೀ ಶ್ರೀ ಬಾಲಯೋಗಿನಿ ಗೀತಾದೇವಿ ಮಾತೆರವರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಕಂಡೆಪ್ಪ ಪಾತರಪಳ್ಳಿ, ವಿಜಯಕುಮಾರ್, ಬಾಲಾಜಿ, ದಿಲೀಪ್, ಸುಧಾಕರ ರಾಠೋಡ್, ಅರುಣಾ, ಅನುಪ್, ನರಸಪ್ಪ, ಶಿವಕರ್ಣಾ, ಸುನೀಲ್ ಪವರ್, ರಮೇಶ್ ಚವ್ಹಾಣ್, ಸಚ್ಚಿದಾನಂದ, ತಾನಾಜಿ, ಅಶೋಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳು, ಪೆÇೀಷಕರು, ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಇದ್ದರು.