ಪಡಿತರ, 10 ಸಾವಿರ ಪರಿಹಾರಕ್ಕೆ ಸಿದ್ದು ಆಗ್ರಹ

ಬೆಂಗಳೂರು,ಮೇ ೧೯- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ತಡೆಯಲು ಸಂಪೂರ್ಣ ಲಾಕ್ ಡೌನ್ ಮಾಡಿ ಲಾಕ್ ಡೌನ್ ಅವಧಿಯಲ್ಲಿ ಪಡಿತರ ಜೊತೆಗೆ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಇಂದಿಲ್ಲಿ ಆಗ್ರಹಿಸಿದ್ದಾರೆ.
ಲಾಕ್ ಡೌನ್ ಮುಂದುವರಿಸಿ ಬಡವರಿಗೆ ಫುಡ್ಡು ಹಾಗೂ ದುಡ್ಡು ಕೊಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ತಮಿಳುನಾಡು ಕೇರಳ, ತೆಲಂಗಾಣ ಹಾಗೂ ಅಂಧ್ರದಲ್ಲಿ ಹೆಚ್ಚಿನ ಪರಿಹಾರ ಘೋಷಣೆ ಮಾಡಿದಾರೆ.
ಅಲ್ಲಿಯೂ ಕೂಡ ಆರ್ಥಿಕ ಸ್ಥಿತಿ ಇದ್ದರೂ ಎಂಟು ಸಾವಿರ ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದಾರೆ. ಅದೇ ರೀತಿ ರಾಜ್ಯದಲ್ಲಿ ಪ್ರಕಟಿಸಿ ಬಡವರ ಹಿತ ಕಾಯಿರಿ ಎಂದು ಒತ್ತಾಯಿಸಿದ್ದಾರೆ.
ಕೊರೋನಾ ಪಾಸಿಟೀವ್ ದರ ಶೇಕಡ ೫ ಕ್ಕಿಂತ ಕಡಿಮೆ ಆಗೋವರೆಗೂ ಲಾಕ್ ಡೌನ್ ಮಾಡಿ ಎಂದು ಆಗ್ರಹಿಸಿದ ಅವರು ಐದು ದಿನವೋ, ಹತ್ತು ದಿನವೋ, ಹದಿನೈದು ದಿನವೋ ಒಟ್ನಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇಕಡ ೫ ಕ್ಕಿಂತ ಕಡಿಮೆ ಆಗೋವರೆಗೂ ಲಾಕ್ಡೌನ್ ಮಾಡಿ ಎಂದು ಆಗ್ರಹಿಸಿದರು
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ವಿವಿಧ ವೃತ್ತಿ ಮಾಡುವರು ಮತ್ತು ಅಸಂಘಿತ ಕಾರ್ಮಿಕರಿಗೆ ೧೨೫೦ ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಾಸ್ತವಿಕವಾಗಿ ೧೧೧೧ ಕೋಟಿ ರೂ ಪ್ರಕಟಿಸಿದ್ದಾರೆ ಎಂದು ದೂರಿದರು.
ಕಳೆದ ಬಾರಿ ೨೧೦೦ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದರು ಅದರಲ್ಲಿ ೮೫೦ ಕೋಟಿ ಕಟ್ಟಡ ಕಾರ್ಮಿಕರಿಗೆ ಅವರ ಕಲ್ಯಾಣ ನಿಧಿಯಿಂದ ಕೊಟ್ಟಿದ್ದಾರೆ. ಈ ಬಾರಿ ಕಡಿಮೆ ಮಾಡಿದಾರೆ ಅದನ್ನು ಸಮರ್ಪಕವಾಗಿ ನೀಡಿಲ್ಲ ಎಂದು ದೂರಿದರು
ಕಳೆದ ಬಾರಿ ಏಳು ಲಕ್ಷ ಜನ ಡ್ರೈವರ್‌ಗಳಿಗೆ ಪರಿಹಾರ ಕೊಡ್ತೀವಿ ಅಂತ ಹೇಳಿ ಎಲ್ಲರಿಗೂ ಕೊಡಲಿಲ್ಲ.ಸಹಕಾರ ಇಲಾಖೆಯ ಸಂಬಂಧ ಅವರ ಘೋಷಣೆ ಸಾಲದ ಕಂತು ಮುಂದೆ ಹಾಕೋದು ಮಾತ್ರ.ಅದರಿಂದ ಸರ್ಕಾರದ ಮೇಲೆ ಹೊರೆ ಆಗಲ್ವಾ ಎಂದರು
ಕಲಾವಿದರು ಹಾಗೂ ಕಲಾ ತಂಡಕ್ಕೆ ಮೂರು ಸಾವಿರ ರೂಪಾಯಿ ಪರಿಹಾರ ಅಂತ ಹೇಳಿದಾರೆ. ಅದು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ