ಪಡಿತರ ವಿತರಿಸಲು ತೆಲಂಗಾಣ ಸರ್ಕಾರ ಅಸಹಾಕಾರ- ಪಿಯೂಷ್ ಗೋಯಲ್ ಆರೋಪ

ನವದೆಹಲಿ, ಜು.20- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ತೆಲಂಗಾಣ ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯೂಶ್ ಗೋಯಲ್ ನೇರ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣ ಸರ್ಕಾರ ಏಪ್ರಿಲ್‌ನಿಂದ 5 ಕೆಜಿ ಹೆಚ್ಚುವರಿ ಪಡಿತರವನ್ನು ವಿತರಿಸುತ್ತಿಲ್ಲ. ನಾವು ಹಲವಾರು ಪತ್ರಗಳನ್ನು ಬರೆದಿದು, ಅವರೊಂದಿಗೆ ಮಾತನಾಡಿದೆವು ಆದರೆ ಅವರು ವಿತರಿಸಲಿಲ್ಲ ಎಂದು ದೂರಿದ್ದಾರೆ.

ಬಡವರಿಗೆ ನೀಡಿದ್ದ ಪಡಿತರ ವಿತರಿಸದೇ ಬಡವರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ದೂರಿದ ಅವರು ತೆಲಂಗಾಣ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ.ದೇಶದ ಬಡ ಜನರಿಗೆ ಸೌಲಭ್ಯ ತಲುಪಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಡಿತರ ವಿತರಣೆ ಮಾಡುತ್ತಿದೆ. ಇದು ಎಲ್ಲಾ ಅರ್ಹ ಪಲಾನಿಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ರಾಜ್ಯ ಸರ್ಕಾರಗಳು ಬಡ ಜನರಿಗೆ ನೀಡುವ ಸೌಲಭ್ಯಗಳನ್ನು ಕಡಿತ ಮಾಡುವುದು ಸಲ್ಲ. ತೆಲಂಗಾಣ ರಾಜ್ಯದಲ್ಲಿ ಕಳೆದ ಎಪ್ರಿಲ್ ನಿಂದ ಹೆಚ್ಚುವರಿಯಾಗಿ ವಿತರಣೆ ಮಾಡಿದ ಪಡಿತರವನ್ನು ಬಡ ಜನರಿಗೆ ತಲುಪಿಸಿಲ್ಲ. ಈ ಸಂಬಂಧ ಹಲವು ಭಾರಿ ಪತ್ರ ಬರೆದರು ರಾಜ್ಯ ಸರ್ಕಾರದಿಂದ ಉತ್ತರ ಬಂದಿಲ್ಲ. ಯಾವುದೇ ಸರ್ಕಾರ ಬಡ ಜನರಿಗೆ ನೀಡುವ ಹಕ್ಕುಗಳನ್ನು ಕಸಿಯುವ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.

3.5 ಲಕ್ಷ ಕೋಟಿ ಖರ್ಚು;.

ಬಡವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ದೇಶದಲ್ಲಿ ಕಳೆದ 25 ತಿಂಗಳಿನಿಂದ ದೇಶದ 80 ಕೋಟಿ ಬಡ ಜನರಿಗೆ 5 ಕೆ.ಜಿ ಹೆಚ್ಚುವರಿಯಾಗಿ ಪಡಿತರ ವಿತರಣೆ ಮಾಡಲಾಗಿದೆ
ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಮೂರುವರೆ ಲಕ್ಷ ಕೋಟಿ ಖರ್ಚು ಮಾಡಿದೆ. ಬಡ ಜನರು ಹಸಿವಿನಿಂದ ಬಳಲ ಬಾರದು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದರು.