ಪಡಿತರ ಚೀಟಿ ತಿದ್ದುಪಡಿಗೆ ತಹಶೀಲ್ದಾರ್ ಸಲಹೆ

ಬಂಗಾರಪೇಟೆ,ಜ,೧೨:ಅನ್ನಭಾಗ್ಯ ಯೋಜನೆಯಡಿ ಅರ್ಹ ಪಡಿತರ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಕೆಲವು ಫಲಾನುಭವಿಗಳು ಪಡಿತರ ಚೀಟಿಗಳಲ್ಲಿನ ವಿವಿಧ ಕಾರಣಗಳಿಂದಾಗಿ ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಸೌಲಭ್ಯದಿಂದ ವಂಚಿತರಾಗಿರುತಿರುವುದರಿಂದ ಪಡಿತರ ಚೀಟಿಯ ಮುಖ್ಯಸ್ಥರು ಸಂಬಂಧಪಟ್ಟ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಿದ್ದುಪಡಿ ಮಾಡಿಸುವಂತೆ ತಹಶೀಲ್ದಾರ್ ಯು.ರಶ್ಮಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಡಿತರ ಚೀಟಿಯಲ್ಲಿನ ಕುಟುಂಬ ಮುಖ್ಯಸ್ಥರಿಲ್ಲದ, ಕುಟುಂಬ ಮುಖ್ಯಸ್ಥರ ಹೆಸರು ಪಡಿತರ ಚೀಟಿಯಲ್ಲಿ, ಅಧಾರ್ ಕಾರ್ಡ್ನಲ್ಲಿ ಮತ್ತು ಬ್ಯಾಂಕ್ ಪಾಸ್ ಬುಕ್‌ಗಳಲ್ಲಿ ಒಂದೇ ಹೆಸರಿರುವಂತೆ ಹೆಸರನ್ನು ತಿದ್ದುಪಡಿ ಮಾಡಿಸುವುದು. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಭೇಟಿ ನೀಡಿ ಪಡಿತರ ಚೀಟಿಗೆ ಕುಟುಂಬ ಮುಖ್ಯಸ್ಥರ ಹೆಸರನ್ನು ಕಡ್ಡಾಯವಾಗಿ ಈಕೆವೈಸಿ ಮಾಡಿಸುವವಂತೆ ಕರೆ ನೀಡಿದ್ದಾರೆ.
ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಎನ್‌ಪಿಸಿಐ(ಆಧಾರ್ ಜೋಡಣೆ) ಮಾಡದ ಪಡಿತರ ಚೀಟಿಗಳವರು ಕೂಡಲೇ ಬ್ಯಾಂಕ್‌ಗೆ ತಮ್ಮ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್‌ನೊಂದಿಗೆ ಭೇಟಿ ನೀಡಿ ಬ್ಯಾಂಕ್ ವತಿಯಿಂದ ನೀಡುವ ಎನ್‌ಪಿಸಿಐ ನಮೂನೆಯನ್ನು ಭರ್ತಿ ಮಾಡಿ ತಮ್ಮ ಬ್ಯಾಂಕ್‌ಗೆ ಆಧಾರ್-ಎನ್‌ಪಿಸಿಐ ಜೋಡಣೆ ಕೂಡಲೇ ಮಾಡಿಸುವುದು. ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಎನ್‌ಪಿಸಿಐ(ಆಧಾರ್ ಜೋಡಣೆ) ಆಗಿ ವಿವಿಧ ಕಾರಣಗಳಿಂದ ಜೋಡಣೆ ನಿಷ್ಕ್ರಿಯವಾಗಿರುವ ಹಾಗೂ ಈವರೆಗೂ ಬ್ಯಾಂಕ್ ಖಾತೆ ಹೊಂದಿಲ್ಲದ ಪಡಿತರ ಚೀಟಿಗಳವರು ಕೂಡಲೇ ಬ್ಯಾಂಕ್‌ಗೆ ತಮ್ಮ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್‌ನೊಂದಿಗೆ ಹತ್ತಿರದ ಅಂಚೆ ಕಛೇರಿಗೆ ಭೇಟಿ ನೀಡಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು ಸದರಿ ಖಾತೆಗೆ ಎನ್‌ಪಿಸಿಐ ಲಿಂಕ್ ಮಾಡಿಸುವುದು ಮಾಡುವಂತೆ ಸಲಹೆ ನೀಡಿದರು.
ಪಡಿತರ ಚೀಟಿ ಡಿಬಿಟಿ ಫಲಾನುಭವಿಗಳಿಗೆ ತಾಲೂಕು ವ್ಯಾಪ್ತಿಯ ಎಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಆದ್ಯತೆ ಮೇರೆಗೆ ತಮ್ಮ ಬ್ಯಾಂಕ್‌ಗೆ ಭೇಟಿ ನೀಡುವ ಪಡಿತರ ಚೀಟಿದಾರರಿಗೆ ಸರ್ಕಾರದ ಯೋಜನೆಯನ್ನು ಡಿಬಿಟಿ ಮೂಲಕ ಪಡೆಯಲು ವಂಚಿತರಾಗಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎನ್‌ಪಿಸಿಐ-ಆಧಾರ್ ಜೋಡಣೆಯನ್ನು ಮಾಡಿ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸಿ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಸಹಕಾರ ನೀಡಲು ಮನವಿ ಮಾಡಿದ್ದಾರೆ.