ಪಡಿತರ ಚೀಟಿದಾರರು ಆ. 31 ರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು ಸೂಚನೆ

ಕಲಬುರಗಿ,ಆ.19:ಸರ್ಕಾರದ ನಿರ್ದೇಶನದಂತೆ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರ ಇ-ಕೆವೈಸಿ (ಜೀವ ಮಾಪಕ/ಹೇಬ್ಬಟ್ಟು ಗುರುತಿನ ದೃಢೀಕರಣ) ಮಾಡಿಸಿಕೊಳ್ಳುವುದು ಅತೀ ಅವಶ್ಯವಿರುತ್ತದೆ. ಆದ್ದರಿಂದ ಇನ್ನೂಳಿದ ಕಲಬುರಗಿ ತಾಲೂಕಿನ ಪಡಿತರ ಚೀಟಿದಾರರು 2023ರ ಆಗಸ್ಟ್ 31 ರೊಳಗಾಗಿ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ಇ-ಕೆವೈಸಿ ಮಾಡಿಕೊಳ್ಳಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹ ಪಡಿತರಚೀಟಿಗಳ ಸದಸ್ಯರುಗಳ ಪಡಿತರ ಚೀಟಿಗಳನ್ನು ಅಮಾನತ್ತುಗೊಳಿಸಲಾಗುವುದು ಹಾಗೂ 2023ರ ಸೆÀಪ್ಟೆಂಬರ್ ಮಾಹೆಯಿಂದ ಆಹಾರಧಾನ್ಯ ಮತ್ತು ಡಿಬಿಟಿ (ಆಃಖಿ) ನಗದು ಸೌಲಭ್ಯವನ್ನು ಸಹ ಸ್ಥಗಿತಗೊಳಿಸಲಾಗುವುದೆಂದು ಕಲಬುರಗಿ ತಹಶೀಲ್ದಾರರಾದ ನಾಗಮ್ಮ ಎಂ ಕಟ್ಟಿಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಸರ್ಕಾರದ ನಿದೇಶನದಂತೆ ಕಲಬುರಗಿ ತಾಲೂಕಿನ ಎಲ್ಲಾ ಪಡಿತರ ಚೀಟಿದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಬಯೋಮೆಟ್ರಕ್ ನೀಡಿ ಇ-ಕೆವೈಸಿ (ಜೀವಮಾಪಕ/ಹೆಬ್ಬಟ್ಟು ಗುರುತಿನ ದೃಢೀಕರಣ) ಮಾಡಿಕೊಳ್ಳಬೇಕು. ಕಲಬುರಗಿ ತಾಲ್ಲೂಕಿನಲ್ಲಿ 79 ನ್ಯಾಯಬೆಲೆ ಅಂಗಡಿಗಳಲ್ಲಿರುವ ಪಿಒಎಸ್ ವ್ಯವಸ್ಥೆಯ ಮೂಲಕ ಉಚಿತವಾಗಿ ಇ-ಕೆವೈಸಿ ಮಾಡುವ ಕಾರ್ಯವು ಪ್ರಗತಿಯಲ್ಲಿರುತ್ತದೆ 
   ಈ ವರೆಗೆ ಕಲಬುರಗಿ ತಾಲ್ಲೂಕಿನಲ್ಲಿ 5406 ಅಂತ್ಯೋದಯ ಅನ್ನ ಪಡಿತರ ಚೀಟಿಗಳಿಗೆ ಸಂಬಂಧಿಸಿದ 20415 ಸದಸ್ಯರ ಪೈಕಿ  19345 ಸದಸ್ಯರ ಹಾಗೂ 33424 ಆಧ್ಯತಾ ಪಡಿತರ ಚೀಟಿಗಳ ಒಟ್ಟು 113424 ಸದಸ್ಯರ ಪೈಕಿ 107075 ಮತ್ತು 8502 ಆದ್ಯತೇತರ ಪಡಿತರ ಚೀಟಿಗಳ ಒಟ್ಟು 28175 ಸದಸ್ಯರ ಪೈಕಿ 12037 ಸದಸ್ಯರ ಇ-ಕೆವೈಸಿ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.