ಪಡಿತರ ಅಕ್ರಮ, ಸಾಗಾಟ ಮತ್ತು ಮಾರಾಟಕ್ಕೆ ಬ್ರೇಕ್: ನೂತನ ಡಿಸಿ ಶಿವಾನಂದ ಕಾಪಸಿ

ದಾವಣಗೆರೆ.ಜು.೧೫: ಜಿಲ್ಲೆಯಲ್ಲಿ ಪಡಿತರ ಅಕ್ರಮ, ಸಾಗಾಟ ಮತ್ತು ಮಾರಾಟ ಸಂಬಂಧ ನನಗೂ ತಿಳಿದಿದೆ. ಬಯೋಮೆಟ್ರಿಕ್ ಬಂದ ಮೇಲೆ ಅಕ್ರಮಕ್ಕೆ ಅವಕಾಶ ಇರಬಾರದು.ಬೆರಳಚ್ಚು ನೀಡಿದ ಮೇಲೆ ಅದೇ ಫಲಾನುಭವಿಗೆ ಪಡಿತರ ನೀಡಬೇಕು. ಇಷ್ಟೆಲ್ಲಾ ಆದರೂ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿದೆ.‌ ಇದರ ವಿರುದ್ಧ ವಿರುದ್ಧ ಬಿಗಿ ಕ್ರಮ ಅನಿವಾರ್ಯ ಎಂದು ನೂತನ ಜಿಲ್ಲಾಧಿಕಾರಿ‌ ಶಿವಾನಂದ ಕಾಪಸಿ ಹೇಳಿದರು.ಇಂದು ತಮ್ಮನ್ನು ಭೇಟಿ‌ ಮಾಡಿದ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಡಿತರ ಅಕ್ರಮ ಗಂಭೀರವಾದ ವಿಷಯ. ಹಾಗಾಗಿ ಈ ಬಗೆ ಸಮಗ್ರ ವರದಿ ತರಿಸಿಕೊಂಡು ಮುಂದೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು‌.ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಲ್ಲಿ ಎಲ್ಲ ಪಡಿತರ ಅಂಗಡಿಗಳಿಗೆ ಮತ್ತು ಉಗ್ರಾಣಗಳಿಗೆ ಸಿಸಿ ಟಿವಿ ಹಾಕುವ ಯೋಜನೆ ಇದೆ. ಇದನ್ನು ರಾಜ್ಯಮಟ್ಟದಲ್ಲಿ ನಿಯಂತ್ರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. ಪ್ರತಿ ಚೀಲಕ್ಕೂ ವಿನೂತನ ಮಾದರಿಯ ಚಿಪ್ ಅಳವಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇದರ ಮೂಲಕ ಉಗ್ರಾಣದಲ್ಲಿ ಎಷ್ಟು ಚೀಲಗಳಿಗೆ, ಖಾಲಿಯಾದ ಚೀಲಗಳು ಎಷ್ಟು ಎನ್ನುವ ಕುರಿತು ನಿಖರ ಮಾಹಿತಿ ನೀಡುವ ವಿದೇಶಿ ತಂತ್ರಜ್ಞಾನ ಅಳವಡಿಕೆ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.ವಿಮಾನ ನಿಲ್ದಾಣ ನಿರ್ಮಾಣ, ಬೃಹತ್ ಉದ್ದಿಮೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದು ಮತ್ತು ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಗಮನ ಹರಿಸಲಾಗುವುದು. ಆಡಳಿತ ಯಂತ್ರ ಚುರುಕುಗೊಳಿಸಲು ನಿರಂತರ ಪ್ರಗತಿ ಪರಿಶೀಲನೆ ಮಾಡಲಾಗುವುದು. ಈ ಮೂಲಕ ಪ್ರತಿ ವ್ಯವಸ್ಥೆ ಕೂಡ ನಿಗದಿತ ಪಥದಲ್ಲಿಯೆ ಸಾಗುವಂತೆ ನೋಡಿಕೊಳ್ಳಲಾಗುವುದು. ಒಂದು ವೇಳೆ ನಿಗದಿತ ಗುರಿ ಸಾಧನೆಯಾಗದೆ ಇರುವುದು ಗಮನಕ್ಕೆ ಬಂದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ಹೇಳಿದರು.ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ವಿಳಂಬ ಮತ್ತು ಲಂಚಗುಳಿತನ ತಪ್ಪಿಸಲು ಕಚೇರಿಗಳಿಗೆ ಪದೇ ಪದೇ ಭೇಟಿ ನೀಡಲಾಗುವುದು. ಅಲ್ಲದೇ, ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು. ಇದಕ್ಕಾಗಿ ಗ್ರಾಮ ವಾಸ್ತವ್ಯ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿವೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಆಡಳಿತದಲ್ಲಿ ರಾಜಕೀಯ ಒತ್ತಡ ಅನ್ನುವುದಕ್ಕಿಂತ ಅದನ್ನು ಜನರ ಆಶೋತ್ತರ ಈಡೇರಿಕೆ ಎನ್ನಬಹುದು. ಜನರ ಸಮಸ್ಯೆಗೆ ನಾವು ಸ್ಪಂದಿಸದೇ ಹೋದಾಗ ಅವರು ಅಲ್ಲಿಗೆ ಹೋಗಿರುತ್ತಾರೆ. ಅದಕ್ಕಿಂತ ಮೊದಲೇ ನಾವೇ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಆ ರೀತಿಯ ಒತ್ತಡಗಳು ಬರಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಪ್ರಸ್ತುತ ಇರುವ ಸವಾಲುಗಳನು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ವ ಸಮಯ ಬೇಕಾಗುತ್ತದೆ. ಆ ನಂತರ ಅವುಗಳನ್ನು ಆದ್ಯತೆಯ ಮೇಲೆ ಪರಿಹರಿಸಲಾಗುವುದು.ಸರ್ಕಾರದ ಮಹತ್ವದ ಯೋಜನೆಗಳನ್ನು ಪರಿಣಾಮಕಾರಿಯಾಗಿ  ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು. ಸ್ಮಾರ್ಟ್ ಸಿಟಿ ಯೋಜನೆ,ದೊಡ್ಡ ಕುಡಿಯುವ ನೀರಿನ ಯೋಜನೆ, ಕೈಗಾರಿಕಗಳು ಸೇರಿದಂತೆ ಸರ್ಕಾರದ ದೊಡ್ಡ ಯೋಜನೆಗಳ ಅನುಷ್ಠಾನ ಮತ್ತು ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಶೇಷ ಗನಮ ಹರಿಸಲಾಗುವುದು. ಅತ್ಯಂತ ಕೆಳ ಹಂತದ ಜನರು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವುಗಳನ್ನು ಬಗೆಹರಿಸಲು ವೈಯಕ್ತಿಕ ಗಮನ ಹರಿಸಲಾಗುವುದು ಎಂದರು.ಯಾವುದೇ ಯೋಜನೆಗಳ ಅನುಷ್ಟಾನ ವಿಚಾರದಲ್ಲಿ ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳವುದು ಮೊದಲ ಆದ್ಯತೆಆಗಬೇಕು. ಆಡಳಿತದ ಅನುಭನದ ಹಿನ್ನೆಲೆಯಲ್ಲಿ ನಮ್ಮ ಯೋಜನೆಗಳು,ಅದರ ಅನುಷ್ಟಾನ ಮತ್ತು ಜನರ ಸಹಭಾಗಿತ್ವದ ಜೊತೆಗೆ ಕೆಲಸ ಮಾಡಿದರೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯ. ನಮ್ಮ ಪ್ರಯತ್ನ ಯಾವಾಗಲೂ ಉನ್ನತಿಯ ಕಡೆಗೆ ಇರುತ್ತದೆ ಎಂದರು.Attachments areaReplyForward