ಪಡಿತರ ಅಕ್ರಮ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ

ಪಡಿತರ ಅಕ್ರಮ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ
ಮಾನ್ವಿ.ಸೆ.೨೬- ಪೋತ್ನಾಳ ಗ್ರಾಮದ ಹೊರ ವಲಯದಲ್ಲಿನ ಗುರುರಾಜ ಶೆಟ್ಟಿ ಎನ್ನುವ ವ್ಯಕ್ತಿಯ ಖಾಸಗಿ ಗೋದಾಮಿನಲ್ಲಿ ರಾಜ್ಯ ಸರ್ಕಾರ ಬಡವರಿಗಾಗಿ ನೀಡುವ ಅಕ್ಕಿ ಹಾಗೂ ಜೋಳವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಸಹಾಯಕ ಆಯುಕ್ತರಾದ ಮೈಬೂಬಿ ಮತ್ತು ದಂಡಧಿಕಾರಿ ರಾಜು ಪಿರಂಗಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಾವಿರಾರು ಅಕ್ಕಿ ಜೋಳದ ಮೂಟೆಗಳು ದೊರಕಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.
ಕಳೆದ ಹಲವು ದಿನಗಳಿಂದ ದಲಿತಪರ ಸಂಘಟನೆ ಮುಖಂಡರು ಇವರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪರಿಣಾಮವಾಗಿ ಇಂದು ಅಧಿಕಾರಿಗಳು ದಾಳಿ ಮಾಡಲಾಗಿದ್ದು, ಐದು ಸಾವಿರ ಜೋಳದ ಮೂಟೆಗಳು ಹಾಗೂ ಏಳು ಸಾವಿರ ಅಕ್ಕಿಯ ಮೂಟೆಗಳು ದೊರಕಿದ್ದು, ಇದರಲ್ಲಿ ಸರಿಸುಮಾರು ಅನ್ನಭಾಗ್ಯದ ಗೋಣಿಚೀಲಗಳು ಪತ್ತೆಯಾದ್ದು ಅಧಿಕಾರಿಗಳು ಖುದ್ದಾಗಿ ವೀಕ್ಷಣೆ ಮಾಡಲಾಗಿದ್ದು ಎನ್ನುವ ವಶಪಡಿಸಿಕೊಂಡು ಅಕ್ರಮವಾಗಿ ನಡೆಯುತ್ತಿದ್ದ ಪಾಲಿಸ್ ದಂದ್ದೆಯ ಕುರಿತು ಸಮಗ್ರವಾದ ತನಿಖೆ ಕೈಗೊಳಲಾಗುತ್ತಿದೆ.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮೈಬೂಬಿ, ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣ, ತಹಶೀಲ್ದಾರ್ ರಾಜು ಪಿರಂಗಿ, ವಾಣಿಜ್ಯ ಇಲಾಖೆ ಅಧಿಕಾರಿಗಳು ಮತ್ತು ಎಪಿಎಂಸಿ ಅಧಿಕಾರಿಗಳು ಜೊತೆಗೆ ಸಂಘಟನೆಯ ಪದಾಧಿಕಾರಿಗಳು ಇದ್ದರು.