ಪಡಿತರ ಅಕ್ಕಿ ಮಾರಿದರೆ ಕ್ರಮ: ನಕುಲ್

ಬಳ್ಳಾರಿ ಡಿ.29: `ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಡಿತರ ಚೀಟಿದಾರರು ಅಕ್ರಮವಾಗಿ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿಯನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರೆ.
ಬಿಪಿಎಲ್ ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದಿರುವವರು ಅಕ್ಕಿಯನ್ನು ಅಕ್ರಮ ಮಾರಾಟ ಮಾಡುತ್ತಿ ದ್ದಾರೆ. ಅಂಥವರು ಮಾರಿದ ಅಕ್ಕಿಯ ಮಾರುಕಟ್ಟೆ ದರವನ್ನು ವಸೂಲು ಮಾಡಲಾಗುವುದೆಂದೂ ಹೇಳಿದ್ದಾರೆ.