ಪಡಿತರ ಅಕ್ಕಿ ಅಕ್ರಮ ಸಾಗಣೆ ವೇಳೆ ದಾಳಿ: 4 ಕ್ವಿ.ಅಕ್ಕಿ ವಶ

ಕಂಪ್ಲಿ, ಏ.30- ಪಟ್ಟಣದಿಂದ 10 ಮುದ್ದಾಪುರ ಗ್ರಾಮಕ್ಕೆ ತೆರಳುವ‌ ಮಾರ್ಗ ಮಧ್ಯೆದಲ್ಲಿನ ಶಿಬಿರದಿನ್ನಿ ಪ್ರದೇಶದಲ್ಲಿರುವ ವೇರ್ ಹೌಸ್ ಗೋದಾಮಿನ ಮುಂದೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿರುವ ಆಟೋ ಮೇಲೆ ತಹಸೀಲ್ದಾರ್ ಗೌಸಿಯಾಬೇಗಂ ಮತ್ತು ಆಹಾರ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ 4 ಕ್ವಿಂಟಾಲ್ ಪ್ರಮಾಣದ ಅಕ್ಕಿ ಜಪ್ತಿ ಮಾಡಿದ ಘಟನೆ ಗುರುವಾರ ಜರುಗಿದೆ.
ಮಹೇಂದ್ರ ಪ್ಯಾಸೆಂಜರ್ ಆಟೋ ಸಂಖ್ಯೆ KA 37 A 4270 ವಾಹನದ ಮೇಲೆ ಅಧಿಕಾರಿಗಳು ದಾಳಿ ಮಾಡಿ 4.08 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ ವಾಹನವನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 55/ 2021 ರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ದಾಳಿ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೇದಾರ ನಾಗರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಗಿರೀಶ್ ಬಾಬು ಮತ್ತು ವಿಜಯಕುಮಾರ್ ಇದ್ದರು.