ಪಡಸಾವಳಿ ;ಸ್ವಚ್ಚತೆಗೆ ಇಳಿದ ಗ್ರಾ,ಪಂ ಅಧ್ಯಕ್ಷ ಉಪಾಧ್ಯಕ್ಷ

ಆಳಂದ ;ಮೇ.1: ತಾಲೂಕಿನ ಪಡಸಾವಳಿಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಗ್ರಾಮದ ಸಾರ್ವಜನಿಕ ಚರಂಡಿಯನ್ನು ಸ್ವಚ್ಛಗೊಳಿಸು ಕಾರ್ಯ ಮಾಡಿದರು. ನಂತರ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಬೆಳಂ ಇಂದು ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಚತೆ ಬಹಳ ಮುಖ್ಯವಾಗಿದೆ ಯಾರ ಮೇಲೆ ಅವಲಂಬನೆಯಾಗದೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನಮ್ಮ ಗ್ರಾಮದವನ್ನು ನಾವೆ ಸ್ಚಚ್ಚ ಮಾಡಬೇಕೆಂದು ಕೆಲಸ ಮಾಡುತ್ತಿದ್ದೇವೆ ಇದರಿಂದ ಗ್ರಾಮಸ್ಥರಿಗೂ ಕೂಡಾ ತಮ್ಮ ಸುತ್ತಮುಲಿನ ಪರಿಸರ ಸದಾ ಸ್ಚಚ್ಚವಾಗಿ ಇಟ್ಟುಕೊಳ್ಳಬೇಕು ಹಾಗೆ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿ ಅಂತರ ಕಾಪಾಡಿಕೊಂಡು ಸರಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಎಲ್ಲರು ಪಾಲಿಸಬೇಕು ಎಂದು ತಿಳಿಸಿದರು. ಉಪಾಧ್ಯಕ್ಷ ಚನಬಸಪ್ಪ ಆಚಲೇರಿ ಸದಸ್ಯರಾದ ಪುನ್ನಾಪ್ಪ ಜಮಾದಾರ್ ವಿಜಯಕುಮಾರ್ ಮನೆ ರಾಜು ಗಾಯಕ್ವಾಡ್ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಿವ ಕಿರಣ್ ಪಾಟೀಲ್,ಹಣಮಂತ ಜಮಾದಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು