ಪಡಸಾವಳಿ ; ಸಾಲಭಾದೆಯಿಂದ ರೈತ ಆತ್ಮಹತ್ಯೆ

ಆಳಂದ ;ಮೇ.4: ತಾಲೂಕಿನ ಪಡಸಾವಳಿ ಗ್ರಾಮದ ರೈತ ಪಪ್ಪು ತಂದೆ ನಾರಾಯಣ ಸಿಂಧಿ ವಯಸ್ಸು 35 ಸೋಮವಾರ ಸಾಲಬಾದೆಯಿಂದಾಗಿ ನೇಣಿಗೆ ಶರಣಾಗಿದ್ದಾನೆ. ಮೃತನಿಗೆ ಹೆಂಡತಿ ಹಾಗೂ ಎರಡು ಜನ ಗಂಡು ಮಕ್ಕಳು ಇದ್ದಾರೆ. ಈತನ ಹೆಸರಿನಲ್ಲಿ ಪಡಸಾವಳಿ ಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಇರುತ್ತದೆ ಯಾವುದೇ ಬೆಳೆ ಬಾರದೆ ಸಂಕಟ ಸಂಕಟದಿಂದ ಖಾಸಗಿಯಾಗಿ 2 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಗ್ರಾಮಕ್ಕೆ ಆಳಂದ ಪಿಎಸ್.ಐ ಮಹಾಂತೇಶ ಪಾಟೀಲ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.