ಪಡಸಾವಳಿ ; ಎಸ್.ಡಿ.ಎಮ್.ಸಿ ರಚನೆ

ಆಳಂದ ;ಮಾ.25: ತಾಲೂಕಿನ ಪಡಸಾವಳಿ ಗ್ರಾಮದ ಸರಕಾರಿ ಪ್ರೌಡಶಾಲೆಗೆ ನೂತನ ಎಸ್.ಎಡಿ.ಎಮ್.ಸಿ ಅಧ್ಯಕ್ಷರನ್ನು ಪಾಲಕರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಭುಲಿಂಗ ಕುಂಬಾರ ಆಯ್ಕೆಯಾದರು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಾಲೆಯನ್ನು ಅಭಿವೃದ್ದಿ ಪಡಿಸಲು ಹಾಗೂ ಶೈಕ್ಷಣಿಕ ಪ್ರಗತಿಗೆ ಸದಾ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಗುರು. ಬಸವರಾಜ ದೊಡ್ಡಮನಿ ಪಿಡಿಓ ನರಸಯ್ಯ ಗುತ್ತೇದಾರ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಬೆಳಂ ಹಾಗೂ ಸದಸ್ಯರು ಪಾಲಕರು ಇದ್ದರು.