ಪಡಸಾವಳಗಿ ಧರ್ಮರಾಯ ಹಾಗೂ ಲಾಡ್ಲೆ ಮಶಾಕ ಜಾತ್ರೆ ರದ್ದು

ಆಳಂದ ;ಮೇ.1: ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ಧರ್ಮರಾಯ ಹಾಗೂ ಲಾಡ್ಲೆ ಮಶಾಕ ಜಾತೆಯನ್ನು ಕೊವಿಡ್ ಹಿನ್ನೆಲೆಯಲ್ಲಿ ರದ್ದು ಪಡಿಸಿರುವುದಾಗಿ ಡಾ.ಶಂಬುಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ ಮೇ 3 ರಂದು ಗ್ರಾಮದಲ್ಲ ಧರ್ಮರಾಯ ರಥೋತ್ಸವ 5 ರಂದು ಲಾಡ್ಲೆ ಮಶಾಕರ ಗಂಧದ ಜಾತ್ರೆ 5ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದವು ಆದರೆ ಕೊರೊನಾ ಸೋಂಕು ತಿವ್ರವಾಗಿ ಹರಡುತ್ತಿರುವುದರಿಂದ ಗ್ರಾಮದಲ್ಲಿ ನಡೆಯಬೇಕಿದ್ದ ಎಲ್ಲಾ ಧಾರ್ಮಿಕ್ರಮಗಳನ್ನು ಸರಕಾರದ ಮಾರ್ಗ ಸೂಚಿಯಂತೆ ರದ್ದು ಪಡಿಸಲಾಗಿದೆ. ಗ್ರಾಮಸ್ಥರು ಮನೆಯಲ್ಲಿಯೆ ಕುಳಿತು ಪೂಜೆ ಮಾಡಬೇಕು ಅನಗತ್ಯವಾಗಿ ಹೊರಗಡೆ ಓಡಾಡಬಾರದು ಕಡ್ಡಾಯವಾಗಿ ಮಸ್ಕ ಧರಿಸಬೇಕು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಕೊರೊನ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ವಾಮಿಜಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.