ಪಡನೂರ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ

ಇಂಡಿ:ಆ.2: ತಾಲೂಕಿನ ಪಡನೂರ ಗ್ರಾ.ಪಂ ಅಧ್ಯಕ್ಷರಾಗಿ ಷಡಕ್ಷರಿ ರೇವಣಸಿದ್ದಪ್ಪ ಮೇತ್ರಿ ಮತ್ತು ಉಪಾಧ್ಯಕ್ಷರಾಗಿ ಭಾರತಿ ಮಾಂತಗೌಡ ಪಾಟೀಲ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು.
ಹಿರಿಯ ತೋಟಗಾರಿಕೆಅಧಿಕಾರಿ ಆರ್.ಟಿ.ಹಿರೇಮಠ ಚುನಾವಣೆ ಅಧಿಕಾರಿಯಾಗಿದ್ದರು. ಪಿಡಿಒ ಶ್ರೀಮಂತ ಬಿರಾದಾರ ಮತ್ತಿತರಿದ್ದರು.