ಪಡನೂರ ಗ್ರಾಮದ ತೋಟದ ವಸತಿಯಲ್ಲಿ ಆಕಸ್ಮಿಕ ಬೆಂಕಿಃ ಗುಡಿಸಲು ಭಸ್ಮ

ಇಂಡಿ, ಜೂ.5-ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮವಾಗಿ ಗುಡಿಸಲಿನಲ್ಲಿದ್ದ ಅನೇಕ ವಸ್ತುಗಳು ಸುಟ್ಟು ಕರಕಲಾದ ಘಟನೆ ಇಂಡಿ ತಾಲೂಕಿನ ಪಡನೂರ ಗ್ರಾಮದ ತೋಟದ ವಸತಿಯಲ್ಲಿ ನಡೆದಿದೆ.
ಪಡನೂರ ಗ್ರಾಮದ ಸಿದ್ದಪ್ಪ ಹಂಗರಗಿ ಅವರಿಗೆ ಸೇರಿದ ಗುಡಿಸಲು ಸುಟ್ಟು ಕರಕಲಾಗಿದೆ. ಗುಡಿಸಲಿನಲ್ಲಿ 10 ಚೀಲ ಗೋಧಿ, 6 ಚೀಲ ತೊಗರಿ, ಕಪಾಟಿನಲ್ಲಿಟ್ಟಿದ್ದ 3.5 ಗ್ರಾಂ ಬಂಗಾರದ ತಾಳಿ, 1 ಲಕ್ಷ10 ಸಾವಿರ ನಗದು ಸೇರಿದಂತೆ ಬಟ್ಟೆ ಬರೆ ದಿನಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ.
ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.