ಪಠ್ಯ ಹೊರತಾದ ಪ್ರಶ್ನೆ ಕೇಳಿ ಸಿಇಟಿ ವಿದ್ಯಾರ್ಥಿಗಳ ಜೀವ ಹಿಂಡಿದ ಸರ್ಕಾರ

ಬೀದರ್: ಏ.19:ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ ‘ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಇಟಿ)ಯು ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಜೀವಶಾಸ್ತ್ರ ಮತ್ತು ಗಣಿತ ಪತ್ರಿಕೆಯಲ್ಲಿ ಸುಮಾರು 20 ‘ಪತ್ಯೇತರ ಪ್ರಶ್ನೆಗಳು’

ದ್ವಿತೀಯ ಪಿಯುಸಿ ಜೀವಶಾಸ್ತ್ರ ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯಕ್ಕೆ ಸಂಬಂಧಿಸಿದ 11 ಪ್ರಶ್ನೆಗಳು ಮತ್ತು ಗಣಿತಕ್ಕೆ ಸಂಬಂಧಿಸಿದ 9 ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಪರೀಕ್ಷೆ ಬರೆದ ರಾಜ್ಯದ ವಿವಿಧೆಡೆಯ ಹಲವು ಅಭ್ಯರ್ಥಿಗಳುಹಾಗೂ ಉಪನ್ಯಾಸಕರು ದೂರಿದ್ದಾರೆ.

ಅಲ್ಲದೇ, ಪತ್ಯೇತರ ಪ್ರಶ್ನೆಗಳನ್ನು ಕೇಳಿರುವುದಕ್ಕೆ ಆತಂಕ ಮತ್ತು ಬೇಸರ ವ್ಯಕ್ತ ಪಡಿಸಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ತಜ್ಞರಲ್ಲದವರಿಂದ ಸಿಇಟಿಗೆ ಪ್ರಶ್ನೆಗಳನ್ನು ತೆಗೆಸಿರುವುದರಿಂದ ಇಂತಹ ದೊಡ್ಡ ಅಚಾತುರ್ಯ ನಡೆದಿದೆ. ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.