ಪಠ್ಯ ವಿಷಯದ ಜೊತೆಗೆ ಮಾನವಿಯ ಮೌಲ್ಯಗಳನ್ನು ಕಲಿಯಿರಿ

ಮಾನ್ವಿ,ಮಾ.೨೫ – ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ನೇತಾಜಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲೀ಼ಷ್ ಮಾಧ್ಯಮದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೋಡಿಗೆ ಸಮಾರಂಭವನ್ನು ಉದ್ಘಾಟಿಸಿ ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ನರಸಿಂಹ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಮಾನವಿಯ ಮೌಲ್ಯಗಳನ್ನು, ಶಿಸ್ತು ಮತ್ತು ಜೀವನದಲ್ಲಿ ಯಶಸ್ಸನು ಪಡೆಯಲು ಅಗತ್ಯವಾದ ಕ್ರಮ, ಶಿಕ್ಷಣವನ್ನು ನೀಡಿದ್ದು ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳಾವಡಿಸಿ ಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದರು.
ನಮ್ಮ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ವಿದ್ಯರ್ಥಿಗಳು ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ೬೨೫ ಕ್ಕೆ ೬೨೪ ಅಂಕ ಪಡೆಯುವ ಮೂಲಕ ಸಂಸ್ಥೆಗೆ ಹೆಸರನ್ನು ತಂದಿದರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದೊರೆಯಲಿ ಎನ್ನುವ ಉದ್ದೇಶ ದಿಂದ ನಾಡಿನ ಹೆಸರಾಂತ ಸಾಧಕರನ್ನು ಸಂಸ್ಥೆಗೆ ಕರೆಸಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ,ಸಂವಾದ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ತಿಳಿಸಿದರು.
ನಂತರ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಕ್ಷರ ಕಲಿಸಿದ ಗುರುವನ್ನು ಸದಾ ಸ್ಮರಿಸಬೇಕು, ಗುರುಗಳ, ತಂದೆ ತಾಯಿಯರ ಮಾರ್ಗದರ್ಶನದಲ್ಲಿ ತಮ್ಮ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ನಂತರ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಕೂಲ್‌ಗೆ ಸಿಸಿ ಕ್ಯಾಮೇರಾ ಸಂಪರ್ಕಕ್ಕೆ ೨೭, ೦೦೦ ರೂ ಬೆಲೆ ಬಾಳುವ ಟಿವಿ ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಅನೀಸ್ ಫಾತಿಮಾ ಮೇಡಂ, ಬಸವರಾಜ್, ರಹೀಂಪಾಷಾ,ರವಿವರ್ಮಾ, ಶಿಕ್ಷಕರಾದ ಕನೀಸ್ ಪಾತಿಮಾ, ರೇಣುಕಾ, ಮರೇಗೌಡ, ಅರುಣಕುಮಾರ,ಬಾಬರ್, ಉಷಾ, ಶೀಲಾ, ವಿನೂತ, ಸಾವಿತ್ರಿ, ಮಾತನಾಡಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.