ಪಠ್ಯ ಪುಸ್ತಕಗಳ ಮೂಲಕ ಭವಿಷ್ಯ ರೂಪಿಸಿಕೊಳ್ಳಿ:


ಸಂಜೆವಾಣಿ ವಾರ್ತೆ
ಕುಕನೂರು, ಜೂ.01 : ಶಾಲಾ ಮಕ್ಕಳು ಪುಸ್ತಕ ಗಳ ಅಧ್ಯಯನ ದಿಂದ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಲು ಪ್ರಯತ್ನಿಸಬೇಕೆಂದು ಸ.ಹಿ.ಮಾಧ್ಯ ಮಿಕ ಶಾಲೆ ಮುಖ್ಯ ಗುರು ಧಮ೯ಪ್ಪ ನಾಯಕ್ ಹೇಳಿದರು.ಬುಧವಾರ ಇಲ್ಲಿಯ ವಿದ್ಯಾನಗರದ ಸ. ಹೀ. ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಗಳಿಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ವರುಷದ ಶಾಲಾ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಮಕ್ಕಳಿಗೆ ಪುಸ್ತಕಗಳ ಕೊರತೆ ಯಾಗದಂತೆ ಎಲ್ಲ ಅನುಕೂಲತೆ ಒದಗಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರವೀಣ ದಾಸ್, ಉಪಾಧ್ಯಕ್ಷೆ ಮಮತಾಜ್ ಬೇಗಂ,ಸದಸ್ಯರಾದ ರುದ್ರಪ್ಪ ಭಂಡಾರಿ,ಅಡಿವೆಪ್ಪ ಬೋರನ್ನವರ್, ಶಿಕ್ಷಕ ರಾದ ವೀರನಗೌಡ ಪಾಟೀಲ್, ಗುಡಿ ಹಿಂಡಲ್, ಹನುಮಂತಪ್ಪ ನಾಮಧಾರಿ, ವೀಣಾ, ಬೀ.ಅರ್.ಸಿ. ಅಸೂಟಿ ಮೊದಲಾದವರು ಹಾಜರಿದ್ದರು.