ಪಠ್ಯೇತರ ಚಟುವಟಿಕೆಯೂ ಮುಖ್ಯ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ5: ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಹೇಳಿದರು.

ಅವರು ಪಟ್ಟಣದ ಮಹಬೂಬ ನಗರದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ನಂ 3ರ ವಾರ್ಷಿಕೋತ್ಸವ ಹಾಗೂ 5 ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಶಾಲೆಯಲ್ಲಿ ಕಲಿತ ಶಿಕ್ಷಣ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಆಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಮಾತನಾಡಿ ಈ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತ ಬಂದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಶ್ರಮಬೇಕು. ದೂರದರ್ಶನ, ಮೊಬೈಲ್‍ಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಇದರಲ್ಲಿ ಪೆÇೀಷಕರ ಜವಾಬ್ದಾರಿಯೂ ಇದೆ’ ಎಂದರು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಿದವು, ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೆ ವೇಳೆ ಗಣ್ಯರು ಹಾಗೂ ಶಾಲೆಗೆ ಉಚಿತವಾಗಿ ಬಣ್ಣ ಹಚ್ಚಿದ ಯುವಕರಿಗೆ ಸನ್ಮಾನಿಸಲಾಯಿತು

ಈ ವೇಳೆಯಲ್ಲಿ ಮುಸ್ಲಿಂ ಸಮಾಜದ ಗುರುಗಳಾದ ಅಮಾನುಲ್ಲಾ ಖಾಜಿ,ಗಣೇಶ ಹೊಳೆಯನ್ನವರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಹೀರಅಬ್ಬಾಸ್ ಮಕಾನದಾರ, ಅಬ್ಬಾಸ ದೇವರಿಡು, ಸೈಪುದ್ದೀನ ಅವರಾಧಿ, ಸಿಕಂದರ ಸಿರಗುಪ್ಪಿ, ಮೊಹಮ್ಮದಸಿರಾಜ ಶಿರಕೋಳ, ಶಾಲೆಯ ಪ್ರಧಾನ ಗುರುಮಾತೆ ಎ ಎಂ ಮುಲ್ಲಾ. ಶಿಕ್ಷಕರಾದ ಸಿ ಎಚ್ ಜಗಾಪುರ, ಫೈರೋಜಾ ಬೇಗಂ ದಾರುಗಾರ, ಕಳ್ಳಿಮಠ ಓಣಿ ರೋಷನಿ ಜಮಾತ್, ಬಡಿ ಜಮಾತ್ ಹಾಗೂ ಹಳ್ಳದ ಓಣಿಯ ಗುರು ಹಿರಿಯರು ನೌ ಜವಾನ್ ಕಮಿಟಿ ಸರ್ವಸದಸ್ಯರು ಉಪಸ್ಥಿತರಿದ್ದರು.