
ಬೀದರ್:ಫೆ.28:ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು ಆಯೋಜನೆ ಮಾಡುವುದರಿಂದ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಾಧ್ಯ’ ಎಂದು ನಗರ ಸಭೆ ಸದಸ್ಯ ರಾಜಾರಾಮ್ ಚಿಟ್ಟಾ ಹೇಳಿದರು.
ಇಲ್ಲಿಯ ರಾಮಪುರೆ ಬಡವಣೆಯ ಎಸ್ ಎಸ್ ಸಾಯಿನಾಥ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ರಾತ್ರಿ ನಡೆದ 4ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಶಾಲೆ ಹಾಗೂ ಪಾಲಕರು ವಿದ್ಯಾರ್ಥಿಗಳಿಗೆ ಮೊಬೈಲ್ ನಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.
ವಕೀಲ ಮಾಣಿಕರಾವ್ ಗೋಡಬಳೆ ಮಾತನಾಡಿ,’ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಮುಖ್ಯವಿದ್ದು, ಪಾಲಕರು ಮನೆಯಲ್ಲಿ ತಂದೆ,ತಾಯಿ ಗುರು ಹಿರಿಯರಿಗೆ ನಮಸ್ಕರಿಸುವ ಅಭ್ಯಾಸ ರೂಢಿಸಬೇಕು.’ ಎಂದರು
ಬಣ್ಣ ಬಣ್ಣದ ಸಮವಸ್ತ್ರ ಧರಿಸಿ ಅಪ್ಪಾ ಅಪ್ಪಾ ಎಂಬ ಸೀನಿಮಾ ಹಾಡಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು.
ಅರುಣ ದಿಂದ ಉದಯ ತರಗತಿ ವರೆಗಿನ ಮಕ್ಕಳು ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ಪ್ರದರ್ಶಿಸಿದರು.
ಶಾಲೆಯ ಅಧ್ಯಕ್ಷ ಶಾಂತಲಿಂಗ ಸಾವಳಿ ಅಧ್ಯಕ್ಷತೆ ವಹಿಸಿದ್ದರು.
ಶಾಲೆ ಕಾರ್ಯದರ್ಶಿ ವಿನೋದ್ ಸಾವಳಿ, ಸಾಗರ ಮಡ್ಡೆ, ನೀಲಮ್ಮ, ಅಖೀಲಾ ಇತರರು ಇದ್ದರು.
ಮುಖ್ಯ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು.ಮಧುಮತಿ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು.