ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ

(ಸಂಜೆವಾಣಿ ವಾರ್ತೆ)
ಬಾದಾಮಿ,ಜು26: ವಿನಯ, ಶ್ರದ್ದೆ, ಭಕ್ತಿ, ಸತತ ಪ್ರಯತ್ನದಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಹಾಗೂ ಕೀರ್ತಿ ಪಡೆಯುಬಹುದು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಪ್ರಾಚಾರ್ಯ ರಾಮಚಂದ್ರ ಭಜಂತ್ರಿ ಹೇಳಿದರು.
ಅವರು ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಪ್ರತಿನಿಧಿಗಳಿಗೆ ಬ್ಯಾಡ್ಝ ನೀಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಶಂಕರರಾವ ಕುಲಕರ್ಣಿ, ಬಿ.ಸಿ. ಸಿಂದಗಿಮಠ, ರಮೇಶ ಹಂಜಿ, ರಮೇಶ ಕತ್ತಿಕೈ, ನಿಂಗಪ್ಪ ಚೂರಿ, ಭಾಗ್ಯಲಕ್ಷ್ಮೀ ಟಿ.ಎಚ್. ರೇಣುಕಾ ಶಿಸ್ತಗಾರ, ಅಕ್ಷತಾ ಕೋಟಿ, ಬಿ.ಎಂ. ಅಮಾತಿಗೌಡರ, ಬಿ.ಆರ್. ಚಿಕ್ಕಣ್ಣವರ, ಶ್ರೀನಿವಾಸ ಈಳಗೇರ, ಅಶೋಕ ಪೂಜಾರಿ, ಮಹೇಶ ಬಡಕನ್ನವರ ಇದ್ದರು.