ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ದೇಶಾಭಿಮಾನ ಮತ್ತು ಸಮಾನತೆಯ ತತ್ವಗಳ ಕುರಿತಾದ ಅರಿವು ಮೂಡಿಸುತ್ತದೆ:ಮಂಜುನಾಥ ಜುನಗೊಂಡ

?????????????????????????????????????????????????????????????????????????????????????????????????????????????????????????????????

ಸಿಂದಗಿ, ಜು.27-ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ದೇಶಾಭಿಮಾನ ಮತ್ತು ಸಮಾನತೆಯ ತತ್ವಗಳ ಕುರಿತಾದ ಅರಿವು ಮೂಡಿಸುತ್ತದೆಂದು ಅಂಕಣಕಾರ ಮಂಜುನಾಥ ಜುನಗೊಂಡ ಹೇಳಿದರು.
ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿರುವ 2022-23 ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವದ ದಿನದಕುರಿತು ಉಲ್ಲೇಖಿಸಿ ಪ್ರತಿಯೊಬ್ಬ ವಿಧ್ಯಾರ್ಥಿಯು ಸೈನಿಕರನ್ನುಅಭಿಮಾನಿಸುವ ಜೊತೆಗೆ ದೇಶದ ಸೇನೆಗೆ ಸೇರಲು ಸಿದ್ದರಾಗಬೇಕು. ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ಮತ್ತು ನೈತಿಕ ಶಿಕ್ಷಣವನ್ನು ನೀಡುವಲ್ಲಿ ಶಾಲಾ ಕಾಲೇಜುಗಳ ಪಠ್ಯೇತರ ಚಟುವಟಿಕೆಗಳು ಮಹತ್ತರಕಾರ್ಯ ನಿರ್ವಹಿಸುತ್ತವೆ. ಅಧ್ಯಯನವನ್ನು ಆಳವಾಗಿ ಅಧ್ಯಯನ ಮಾಡುವವನು ಮಾತ್ರ ಈ ದೇಶವನ್ನು ಆಳುವ ಶಕ್ತಿ ಬರುತ್ತದೆ. ವಿದ್ಯಾರ್ಥಿಗಳು ನಿರಂತರ ಕ್ರೀಯಾಶೀಲರಾಗಿ ವಿದ್ಯಾವಂತರಾಗಬೇಕು ಎಂದರು.
ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಒಂದೆ ಮುಖ್ಯವಲ್ಲಅದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ಮತ್ತು ಸಾಮಾಜಿಕಜ್ಞಾನವುಅತಿ ಮುಖ್ಯವಾಗಿದೆ. ವಿದ್ಯಾರ್ಥಿಜೀವನದಲ್ಲಿಯೆ ಅನೇಕ ಅನುಭವಗಳನ್ನು ಪಡೆದು ಬದುಕನ್ನು ಸಾರ್ಥಕರೀತಿಯಲ್ಲಿ ಸಾಗಿಸಬೇಕು. ಇಂದುಜಗತ್ತುಅತ್ಯಂತಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಸಾಗುತ್ತಿದೆ ನಾವು ಅದರೊಂದಿಗೆ ಹೆಜ್ಜೆ ಹಾಕುವಂತವರಾಗಬೇಕುಎಂದರು.
ಈ ಸಂಧರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುಭವಗಳೇ ನಮ್ಮ ಬದುಕಿಗೆ ಅನೇಕ ಮಾರ್ಗಗಳನ್ನು ನೀಡುತ್ತವೆ. ಶಿಕ್ಷಣ ಒಂದುದೊಡ್ಡಅಸ್ತ್ರ ಅದನ್ನು ನಿಷ್ಠೆಯಿಂದ ಪಡೆದುಕೊಳ್ಳಬೇಕು. ಸಾಧನೆಯ ಅನೇಕ ಕನಸುಗಳು ನಮ್ಮ ಗುರಿಗಳಿಗೆ ಸಹಕಾರ ನೀಡುತ್ತವೆಉತ್ತಮ ಕನಸು, ಉತ್ತಮಜ್ಞಾನ, ಉತ್ತಮ ನಡತೆ ಮತ್ತು ಸಂಸ್ಕಾರಗಳು ಬದುಕನ್ನು ಪವಿತ್ರಗೊಳಿಸುತ್ತವೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪ್ರತಿನಿ„ಗಳಿಗೆ ಉಪನ್ಯಾಸಕ ಆರ್.ಸಿ.ಕಕ್ಕಳಮೇಲಿ ಪ್ರಮಾಣ ವಚನ ಬೋಧಿಸಿದರು. ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕ ಶಂಕರಗೌಡ ಪಾಟೀಲ ಯಂಕಂಚಿ, ವಿದ್ಯಾರ್ಥಿ ಸಂಘದಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ಪ್ರಧಾನ ಕಾರ್ಯದರ್ಶಿ ಭಾಗ್ಯಶ್ರೀ ಹೂಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಉಪನ್ಯಾಸಕ ಎಸ್.ಎ.ಪಾಟೀಲ ಸ್ವಾಗತಿಸಿದರು, ಸ್ಕೌಡ್ಸ್ ಮತ್ತುಗೈಡ್ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಉಪನ್ಯಾಸಕಿ ಮುಕ್ತಾಯಕ್ಕಕತ್ತಿ, ಸಿದ್ಧಲಿಂಗ ಕಿಣಗಿ ನಿರೂಪಿಸಿದರು, ಭಾಗ್ಯಶ್ರೀ ಹೂಗಾರ ವಂದಿಸಿದರು.