ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ಸೃಜನಶೀಲತೆ ಹೆಚ್ಚುತ್ತದೆ:ಬಂದೇನವಾಜ ನಾಲ್ತವಾಡ

ಕೆಂಭಾವಿ:ಅ.16:ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವದರಿಂದ ಸೃಜನಶೀಲತೆ ಹೆಚ್ಚುತ್ತದೆ ಎಂದು ದಸರಾ ಸಮಿತಿ ಕಾರ್ಯದರ್ಶಿ ಬಂದೇನವಾಜ ನಾಲತವಾಡ ಹೇಳಿದರು.
ಪಟ್ಟಣದ ಸಾಯಿ ಪಬ್ಲಿಕ್ ಸ್ಕೂಲ್‍ನಲ್ಲಿ ದಸರಾ ಉತ್ಸವ ಸಮಿತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಮರಣ ಶಕ್ತಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷ ವಿದ್ಯಾರ್ಥಿಗಳಿಗಾಗಿ ಸ್ಮರಣ ಶಕ್ತಿ, ರಂಗೋಲಿ ಹಾಗೂ ಜಾನಪದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ದಸರಾ ರಜೆ ಇದ್ದರೂ ಮಕ್ಕಳು ಅತ್ಯುತ್ಸಾಹದಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಸರಕಾರಿ ಹಾಗೂ ಖಾಸಗಿ ಶಾಲೆಯ ಶಿಕ್ಷಕರು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವಂತೆ ಪ್ರೇರೆಪಿಸಬೇಕು. ಇಂತಹ ಸ್ಪರ್ಧೆಗಳಿಂದ ಮಕ್ಕಳಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಸರಾ ಸಮಿತಿ ಅಧ್ಯಕ್ಷ ಡಿ.ಸಿ.ಪಾಟೀಲ, ಸಾಯಿ ಶಾಲೆಯ ನೀಲಕಂಠರಾಯಗೌಡ ಪಾಟೀಲ, ಜ್ಯೋತಿ ಪಾಟೀಲ, ಶರಣಗೌಡ, ರೇವಣಸಿದ್ದಯ್ಯ, ಸಂತೋಷ, ಪಟೇಲ, ರ್ಹಾನಾ ಬೇಗಂ, ಅರುಣಕುಮಾರ, ಹಣಮಂತ ಶಹಾಪುರ, ರಾಜ ಅಹ್ಮದ ಸೇರಿದಂತೆ ಇತರರಿದ್ದರು.