ಪಠ್ಯೇತರ ಚಟುವಟಿಕೆಗಳಿಂದ ಕೌಶಲ್ಯ ವೃದ್ಧಿ

ಮುನವಳ್ಳಿ,ಡಿ31: “ಎನ್.ಸಿ.ಸಿ ಮತ್ತು ಎನ್.ಎಸ್.ಎಸ್.ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲಗಳನ್ನು ವೃದ್ಧಿಸಿಕೊಳ್ಳುವರು. ತರಗತಿಗಳ ಜೊತೆಗೆ ಕ್ರೀಡೆ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಶಿಸ್ತಿನ ಮಹತ್ವ ಮತ್ತು ಏಕತೆಯನ್ನು ಬೆಳೆಸಿಕೊಳ್ಳಲು ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಆಸಕ್ತ ವಿಷಯಗಳ ಕಲಿಕೆಯತ್ತ ಗಮನ ಹರಿಸುವ ಮೂಲಕ ಪಾಠದ ಜೊತೆಗೆ ನಾಯಕತ್ವ ಗುಣ. ವಾಕ್ ಚಾತುರ್ಯ, ಸಾಮಾನ್ಯ ಜ್ಞಾನ ವೃದ್ದಿಯಾಗುವುದು ಎಂದು ಶಿಕ್ಷಕ ವೈ.ಬಿ.ಕಡಕೋಳ ಹೇಳಿದರು.
ಅವರು ಪಟ್ಟಣದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2023-24 ನೇ ಸಾಲಿನ ಬಿ.ಎ.ಮತ್ತು ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ, ಪಠ್ಯೇತರ ಚಟುವಟಿಕೆಗಳು ಹಾಗೂ ಎನ್.ಸಿ.ಸಿ ಎನ್.ಎಸ್.ಎಸ್ ಜೊತೆಗೆ ಐಕ್ಯೂಎಸಿ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಎಂ.ಆರ್.ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಕೋಶಾಧ್ಯಕ್ಷರು ರವೀಂದ್ರ ಯಲಿಗಾರ ಸಮಾರಂಭ ಉದ್ಘಾಟಿಸಿದರು, ಅಮೀತ ಕರೀಕಟ್ಟಿ, ಪ್ರಾಚಾರ್ಯ ಡಾ.ಎಂ.ಎಸ್.ಬಾಗೇವಾಡಿ, ಶಿಕ್ಷಕರಾದ ಎಸ್.ಬಿ.ಹಿರಲಿಂಗಣ್ಣವರ, ವ್ಹಿ.ಎಫ್.ಚಿಕ್ಕಮಠ, ಬಿ.ಬಿ.ನಾವಲಗಟ್ಟಿ, ಪ್ರಾಚರಗಳಾದ ಎಸ್.ಎ.ಯಲಿಗಾರ, ಪಿ.ಎಫ್.ಪಟ್ಟಣಶೆಟ್ಟಿ, ಪೃಥ್ವಿರಾಜ ಪಾಟೀಲ, ಶ್ರೀಶೈಲ.ಗೋಪಶೆಟ್ಟಿ, ಲಕ್ಷ್ಮೀ ಅಬ್ಬಾರ, ರತ್ನಾ ಮೇಟಿ, ಕಾಲೇಜು ವಿದ್ಯಾರ್ಥಿ ಒಕ್ಕೂಟದ ತುಕಾರಾಮ ನೇಗಿನಾ¼,À ಆದರ್ಶ ಕರದಿನ, ಮುತ್ತು ಮೇಟಿ, ಅಭಿಷೇಕ ಹಡಗಿನಾ¼, ಯಲ್ಲಪ್ಪ ನರಿ ಸೇರಿದಂತೆ ಬಿ.ಎ. ಹಾಗೂ ಬಿ.ಕಾಂ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಮಾ ಚವಡಪ್ಪನವರ ನಿರೂಪಿಸಿದರು.ಪ್ರಾಚಾರ್ಯ ಎಂ.ಎಸ್.ಬಾಗೇವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತುಕಾರಾಮ ನೇಗಿನಾಳ ವಂದಿಸಿದರು.