ಪಠ್ಯದ ಜೊತೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ ಅಗತ್ಯ: ಸುಧಾಕರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.28: ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಜೊತೆಗೆ ಭಾರತದ ಇತಿಹಾಸ, ಆರ್ಥಿಕತೆ, ಭೌಗೋಳಿಕ, ವಿಜ್ಞಾನ ತಂತ್ರಜ್ಞಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕೆಂದು ಸರಳಾದೇವಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಸುಧಾಕರ್ ಹೇಳಿದರು. 
ನಗರದ  ಸರಳಾದೇವಿ ಸತೀಶ್ಚಂದ್ರ  ಅಗರ್ ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೀಮಾರಾವ್ ಐ.ಎ.ಎಸ್. ಸ್ಟಡಿ ಸರ್ಕಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ  ಸ್ಪರ್ಧಾತ್ಮಕ ಪರೀಕ್ಷೆ  ಉಚಿತ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪಾಂಶುಪಾಲ ಡಾ.ಹೆಚ್.ಕೆ ಮಂಜುನಾಥ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ.  ಜಿ.ಕೆ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಜಿ.ಕೆ ಸ್ವಾಮಿ ಉದ್ಘಾಟನೆ ಮಾಡಿದರು.
 ಸಂಪನ್ಮೂಲ ಡಾ.ಛಲವಾದಿ ಚನ್ನಬಸಪ್ಪ ಅವರು ಮಾತನಾಡಿ.
ವಿದ್ಯಾರ್ಥಿಗಳು ಪದವಿ ಮುಗಿಯುವವರೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು  ಐಎಎಸ್, ಐಪಿಎಸ್,ಕೆಎಎಸ್, ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ತಮ್ಮ ಸಾಧನೆಯನ್ನು ಸಮಾಜ ಗುರಿತಿಸುವಂತಾಗಬೇಕು ಎಂದು ಹೇಳಿ ಇದೇ ಸಂದರ್ಭದಲ್ಲಿ  ತಮ್ಮ ಲೀಗಲ್ ಆಸ್ಪೆಕ್ಟ್ಸ್ ಆಫ್ ಬ್ಯುಸಿನೆಸ್ ಕೃತಿಯನ್ನು ಬಿಡುಗಡೆ ಮಾಡಿದರು.
ಜಿ.ಕೆ ಫೌಂಡೇಶನ್ ಅಧ್ಯಕ್ಷ ಜಿ.ಕೆ ಸ್ವಾಮಿ ಕಾರ್ಯಕ್ರಮ ಉದ್ಘಾಟನೆ ಮಾಡಿ,  ವಿದ್ಯಾರ್ಥಿಗಳು ಉನ್ನತ ಉದ್ಯೋಗಗಳನ್ನು ಪಡೆಯಬೇಕು ಎಂದು ಹೇಳಿದರು. ನಂತರ ಅವರು
ತಮ್ಮ ತರಬೇತಿ ಸಂಸ್ಥೆಯ ಅರ್ಹತೆ ಪರೀಕ್ಷೆಯಲ್ಲಿ ಪಾಸಾದ 20 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಉಚಿತವಾಗಿ ವಿತರಸಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ರೆಡ್ಡಿ ಮಾತನಾಡಿ,
ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗಿರುವ ಪುಸ್ತಕಗಳನ್ನು ಮತ್ತು ವಿಷಯಕ್ಕೆ ಸಂಬಂಧಿಸಿದಂತ ಪುಸ್ತಕಗಳನ್ನು ಓದುತ್ತಿರಬೇಕು. ವಿದ್ಯಾರ್ಥಿಗಳಿಗೆ ಪರಿಶ್ರಮ,ಛಲ ಇರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ  ಡಾ.ಹೊನ್ನುರಾಲಿ ಇದ್ದರು.
ಭೀಮಾರಾವ್ ಐ.ಎ.ಎಸ್. ಸ್ಟಡಿ ಸರ್ಕಲ್ ತರಬೇತಿ ಸಂಸ್ಥೆಯ ನಿರ್ದೇಶಕ   ಶೇಖರಪ್ಪ. ನಮ್ಮ ತರಬೇತಿ ಸಂಸ್ಥೆಯಿಂದ ನಾಲ್ಕು ತಿಂಗಳು ಉಚಿತ ತರಬೇತಿಯನ್ನು ನಿಡಲಾಗಿದೆ. ಬೇರೆ ನಗರಗಳಿಗೆ ಹೋಗದಂತೆ  ನಮ್ಮ ಬಳ್ಳಾರಿ ನಗರವನ್ನು ಸ್ಪರ್ಧಾತ್ಮಕ ಪರೀಕ್ಷೆಯ ನಗರವಾಗಿ ರೂಪಿಸಬೇಕು ಎಂದು ಹೇಳಿದರು.