ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆ ಅತ್ಯಗತ್ಯ

ಕೋಲಾರ,ಮಾ.೨೫: ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಬಹಳ ಮುಖ್ಯವೆಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ಹರಟಿ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಳೆಂಗೇರಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಕ್ರೀಡಾ ಉಪಕರಣಗಳನ್ನು ಬಳಸುವ ರೀತಿ ನೀತಿಯನ್ನು ಸವಿವರವಾಗಿ ತಿಳಿಸಿದರು.
ಮಗುವಿನ ದೈಹಿಕ ಮಾನಸಿಕ ಆರೋಗ್ಯಕ್ಕೆ ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ವೇಳೆಯಲ್ಲಿ ವ್ಯಾಯಾಮ ಕ್ರೀಡಾ ಆಟಗಳನ್ನು ಕಡ್ಡಾಯವಾಗಿ, ದೈಹಿಕ ಶಿಕ್ಷಕರೊಂದಿಗೆ ಎಲ್ಲಾ ಶಿಕ್ಷಕರು, ಶಾಲಾ ಅವಧಿಯಲ್ಲಿ ತರಬೇತಿ ನೀಡಿ ಮಕ್ಕಳನ್ನು ಸದೃಢ ಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಚೌಡಪ್ಪನ ಅವರು ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಕ್ರೀಡಾಲೋಕದಲ್ಲಿ ಅದ್ವಿತೀಯವಾಗಿ ಗುರುತಿಸಿಕೊಂಡವರ ಜೀವನ ಚರಿತ್ರೆಗಳನ್ನು ಕಥೆಯ ರೂಪದಲ್ಲಿ ವಿವರಿಸಿ ದೇಶಕ್ಕೆ ನಮ್ಮಿಂದ ಕೊಡುಗೆ ನೀಡುವ ಪ್ರಜೆಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಕೆಂಬೋಡಿ ಮುನಿಸ್ವಾಮಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುಬ್ರಮಣಿ ದೈಹಿಕ ಶಿಕ್ಷಕರಾದ ಕೆ ಮುನಿರಾಜು, ಶಾಲಾ ಸಿಬ್ಬಂದಿಯಾದ ಕೆ ಎಸ್ ರಾಜ ಗೋಪಾಲಕೃಷ್ಣ ಎಸ್ ಉಮಾದೇವಿ ಸಿ ಮಂಜುಳಾ ಡಿ ನೇತ್ರಾವತಿ ಅಡುಗೆ ಸಿಬ್ಬಂದಿ ಸಂತೋಷಿ ರಾಧಮ್ಮ ಕಸ್ತೂರಿಬಾಯಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.