
ಮುಂಬೈ, ಮಾ. ೭- ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಪತ್ನಿ ಸಫಾ ಬೇಗ್ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬರೀ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ಪಠಾಣ್ ಮಿಂಚಿದ್ದರು. ಹಲವು ಬಾರಿ ಆರಂಭಿಕರಾಗಿಯೂ ಬ್ಯಾಟ್ ಬೀಸಿದ್ದಾರೆ. ೨೦೨೦ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಪಠಾಣ್, ಪ್ರಸ್ತುತ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ತಮ್ಮ ಕರಿಯರ್ನಲ್ಲಿ ಪಠಾಣ್, ಎಂದೂ ವಿವಾದಕ್ಕೆ ಸುದ್ದಿಯಾದವರಲ್ಲ ಎಂಬುದು ವಿಶೇಷ.
ತಮ್ಮ ವೃತ್ತಿ ಜೀವನದಲ್ಲಿ ಫುಲ್ ಓಪನ್ ಆಗಿರುವ ಪಠಾಣ್, ವೈಯಕ್ತಿಕ ಜೀವನದಲ್ಲಿ ಮಾತ್ರ ಸಖತ್ ಚೂಸಿ..! ಅದರಲ್ಲೂ ಪತ್ನಿ ಸಫಾ ಬೇಗ್ ವಿಚಾರದಲ್ಲಂತೂ, ಪಠಾಣ್ ಸ್ವಲ್ಪ ಜಾಸ್ತಿನೇ ಪ್ರೈವೆಸಿ ಮೆಂಟೇನ್ ಮಾಡಿದ್ದಾರೆ. ಪಠಾಣ್ ಯಾವುದೇ ಪಾರ್ಟಿ, ಫಂಕ್ಷನ್ಗೆ ಹೋದರೂ, ಸಫಾ ಜೊತೆಗೆ ಇರಲೇಬೇಕು. ಆದರೂ ಪಠಾಣ್ ಪತ್ನಿಯ ಮುಖ ದರ್ಶನ ಮಾಡಿದವರು ತೀರಾ ವಿರಳ.!
ಸಾಮಾಜಿ ಜಾಲತಾಣದಲ್ಲಿ ಪಠಾಣ್, ಪತ್ನಿ ಜೊತೆಗಿರುವ ಪೋಟೋ ಪೋಸ್ಟ್ ಮಾಡಿದರೂ ಆಕೆಯ ಮುಖವನ್ನ ಮಾತ್ರ ತೋರಿಸುವುದಿಲ್ಲ. ಪ್ರತಿ ಪೋಟೋದಲ್ಲೂ ಸಫಾ ಬೇಗ್ ಬುರ್ಖಾ ಧರಿಸಿಯೇ ಇರುತ್ತಾರೆ.
ಸಫಾ ಬೇಗ್ ಪಠಾಣ್ ಅವರ ಸಂಸ್ಕೃತಿಯನ್ನು ಗೌರವಿಸಿದ್ದಕ್ಕಾಗಿ ನೆಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಉರ್ಫಿ ಕೊ ಬೋಲೋ ಇನ್ಸೆ ಕುಚ್ ಸೀಹೆ” ಎಂದು ಬಳಕೆದಾರರು ಬರೆದಿದ್ದಾರೆ. “ನಗ್ನತೆಯನ್ನು ಮಾತ್ರ ಸೌಂದರ್ಯ ಎಂದು ಭಾವಿಸುವ ಉರ್ಫಿಗೆ ಯಾರಾದರೂ ಈ ಚಿತ್ರವನ್ನು ತೋರಿಸಬಹುದೇ … ಈಗ ಇಲ್ಲಿ ತನ್ನ ಕಣ್ಣುಗಳಿಂದ ನೋಡಿ ಅವಳು ಸುಂದರವಾಗಿ ಕಾಣುತ್ತಾಳೆ” ಎಂದು ಮತ್ತೊಬ್ಬರು ಬರೆದಿದ್ದಾರೆ.
ಪಠಾಣ್ ಪತ್ನಿ ಸಫಾ ಬೇಗ್ ಅವರು ಯಾವ ಬಾಲಿವುಡ್ – ಹಾಲಿವುಡ್ ಹೀರೋಯಿನ್‌ಗೂ ಕೂಡ ಕಡಿಮೆ ಇಲ್ಲ.! ಅಷ್ಟು ಸುಂದರ. ಸಫಾರ ಅಂದ ಚಂದಕ್ಕೆ ಎಂತವರೂ ಫಿದಾ ಆಗುತ್ತಾರೆ ಎಂದು ಹೇಳುತ್ತಾರೆ.
ಇರ್ಫಾನ್ ಪಠಾಣ್ ಮತ್ತು ಸೌದಿ ಅರೇಬಿಯಾದ ಮಾಜಿ ಮಾಡೆಲ್ ಸಫಾ ಬೇಗ್ ಪಠಾಣ್ ೨೦೧೬ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇರ್ಫಾನ್ ಮತ್ತು ಸಫಾ ಇಬ್ಬರು ಮಕ್ಕಳ ಹೆಮ್ಮೆಯ ಪೋಷಕರಾಗಿದ್ದಾರೆ.