ಪಟ್ಟಭದ್ರಾ ಹಿತಾಸಕ್ತಿಗಳಿಂದ ದೂರವಿರಲು ಸಿಎಂ ಕರೆ

ಕೋಲಾರ:ಡಿ,೨೯:ಆದಿಮ ಸಾಂಸ್ಕೃತಿಕ ಕೇಂದ್ರ ಸಮಾಜವನ್ನು ಬದಲಾವಣೆ ಮಾಡುವ ಕೇಂದ್ರವಾಗಲಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರವು ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜೀಯಿಲ್ಲ, ಅಧಿಕಾರಕ್ಕಾಗಿ ಅಂಟಿಕೊಳ್ಳುವುದಿಲ್ಲ, ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳಿಂದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ತೇರಹಳ್ಳಿ ಗ್ರಾಮ ಸಮೀಪದ ಶಿವಗಂಗೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಹುಣ್ಣಿಮೆ ಹಾಡು-೨೦೦ರ ಸಾಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಜನಪದ ಹಾಡುಗಳನ್ನು ಕೇಳಿದಾಗ, ನೃತ್ಯಗಳನ್ನು ನೋಡಿದಾಗ ಮೈ ನವಿರೇಳುತ್ತದೆ. ಈ ಸಂದರ್ಭದಲ್ಲಿ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಆದಿಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇದೇ ಮೊದಲ ಆಗಮಿಸಿದ್ದು, ಕಾರ್ಯಕ್ರಮಗಳು ಬಹಳ ಸಂತೋಷವನ್ನು ಉಂಟು ಮಾಡಿದೆ. ಬದುಕಿನ ಬಗ್ಗೆ ಇನ್ನೊಮ್ಮೆ ನೋಡತಕ್ಕಂತಹ ಪರಿಸ್ಥಿತಿ ಬಂದಿದೆ. ಮನುಷ್ಯನ ಸಂಬಂಧಗಳು ಅದು ಸಮಾಜದಲ್ಲಿ ಬಹಳ ಮುಖ್ಯ.
ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಆದಿಮ ಕೇಂದ್ರದವರು ಜನರಲ್ಲಿ ಮನುಷ್ಯತ್ವವ ಉಂಟು ಮಾಡುವ ಪ್ರಕ್ರಿಯೆನ್ನು ಮಾಡುತ್ತಿದೆ. ಹುಟ್ಟುವಾಗ ನಾವೆಲ್ಲರೂ ವಿಶ್ವಮಾನವರಾಗಿ, ಸಾಯುವಾಗ ಅಲ್ಪ ಮಾನವರಾಗುತ್ತವೆ, ಹುಟ್ಟುವಾಗ ವಿಶ್ವಮಾನವರಾಗಲು ಸಾಧ್ಯವಾಗದಿದ್ದರು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸೇರಿದವರು, ಶೋಷಿತರು ಎಂದು ದೂಷಣೆಗೆ ಒಳಗಾದರು. ಅಕ್ಷರ ಸಂಸ್ಕೃತದಿಂದ ವಂಚಿತರಾದರು, ಇದರಿಂದ
ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಆದಿಮ ಸಾಂಸ್ಕೃತಿಕ ಕೇಂದ್ರವು ನೆಲದ ಸಾಂಸ್ಕೃತಿಯನ್ನು ಬೆಳೆಸಿಕೊಂಡು ಬರುವಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಬೆಟ್ಟದ ಮೇಲಿರುವ ಈ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.


ಆದಿಮ ಸಾಂಸ್ಕೃತಿ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಒಂದು ರೂಪಾಯಿ ಶಕ್ತಿ ಏನು ಎಂಬುದನ್ನು ಕಂಡುಕೊಂಡಿದ್ದೇವೆ, ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗಾಗಿ ಸಾಕಷ್ಟು ಮಂದಿ ಶ್ರಮಿಸಿದ್ದಾರೆ, ಕಾಲಕ್ಷೇಪಕ್ಕೆ ಕಟ್ಟಿದ ಕೇಂದ್ರವಲ್ಲ ಎಂದು ಹೇಳಿದರು.
ಸಚಿವರಾದ ಡಾ.ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಮಾಜಿ ಸಚಿವರಾದ ಕೆ.ಶ್ರೀನಿವಾಸಗೌಡ, ಎಚ್.ನಾಗೇಶ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿ.ಪಂ ಸಿಇಒ ಪದ್ಮ ಬಸವಂತಪ್ಪ, ಎಸ್ಪಿ ಎಂ.ನಾರಾಯಣ, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎಸ್.ಮುನಿಸ್ವಾಮಿ ಮತಿತರರು ಹಾಜರಿದ್ದರು.