ಪಟ್ಟಪಳ್ಳಿ: ರಸ್ತೆ ದುರಸ್ತಿಗೆ ಆಗ್ರಹ

ಚಿಂಚೋಳಿ,ಸೆ.2- ತಾಲೂಕಿನ ಪಟ್ಟಪಳ್ಳಿ ಕ್ರಾಸ್ ಹತ್ತಿರದ ಮುಖ್ಯ ರಸ್ತೆಯ ಪಕ್ಕದ ತಡೆಮೊರಂ ಮಣ್ಣು ಕುಸಿದು ಹೋಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ಮೊದಲು ಬಿದ್ದ ಮಳೆಯಿಂದ ರಸ್ತೆಯ ಪಕ್ಕದ ತಡೆಮಣ್ಣು ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ತೆಗ್ಗುಗುಂಡಿ ನಿರ್ಮಾಣವಾಗಿದೆ. ಈ ಮಾರ್ಗದ ರಸ್ತೆ ಸವಾರರು ಆಯಾ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿ ಪಟ್ಟಪಳ್ಳಿ ಕ್ರಾಸ್ ರಸ್ತೆ ಪಕ್ಕದಲ್ಲಿ ಕುಸಿದ ಮೊರಂ ಭರ್ತಿಮಾಡಿ ತೆಗ್ಗುಗುಂಡಿಗಳನ್ನು ಗುಂಬಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮದ ಮುಖಂಡರಾದ ಡಾ. ಆನಂದ ರೆಡ್ಡಿ ಅವರು ಆಗ್ರಹಿಸಿದ್ದಾರೆ.