ಪಟ್ಟದ್ದೇವರ ಸ್ಮರಣೋತ್ಸವಕ್ಕೆ ಆಹ್ವಾನ

ಭಾಲ್ಕಿ:ಮಾ.14: ಪಟ್ಟಣದಲ್ಲಿ ಏಪ್ರಿಲ್ 21 ರಿಂದ 23ರ ವರೆಗೆ ಜರುಗಲಿರುವ ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ, ವಚನ ಜಾತ್ರೆ-2023 ಮತ್ತು ಬಸವ ಜಯಂತಿ ಉದ್ಘಾಟನೆ ಸಮಾರಂಭಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನ ರಾಜಭವನದಲ್ಲಿ ಸೋಮವಾರ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಸಮಾರಂಭಕ್ಕೆ ಆಹ್ವಾನ ಮಾಡಲಾಯಿತು.

ಬಸವಾದಿ ಶರಣರು ನಡೆದಾಡಿದ ಭೂಮಿ ಮತ್ತು ಗಡಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಸಲ್ಲಿಸಿರುವ ಸಮಾಜಮುಖಿ ಸೇವೆ ಬಗ್ಗೆ ರಾಜ್ಯಪಾಲರು ತಿಳಿದು ಕೊಂಡಿದ್ದು ಅಂತಹ ಪುಣ್ಯ ಭೂಮಿಗೆ ಬರಲು ಉತ್ಸಕರಾಗಿದ್ದು, ಪಟ್ಟದ್ದೇವರ ಸ್ಮರಣೋತ್ಸವ ಮತ್ತು ಬಸವ ಜಯಂತಿ ಸಮಾರಂಭಕ್ಕೆ ಉದ್ಘಾಟಕರಾಗಿ ಬರುವುದಾಗಿ ತಿಳಿಸಿದ್ದಾರೆ ಎಂದು ಗುರುಬಸವ ಪಟ್ಟದ್ದೇವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ನಿರ್ದೇಶಕ ಶಶಿಧರ ಕೋಸಂಬೆ ಇದ್ದರು.