ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಅಕ್ಕಮಹಾದೇವಿ ಜಯಂತಿ

ಬೀದರ: ಎ.28:ವೀರ ವೈರಾಗಿ ಅಕ್ಕಮಹಾದೇವಿ ತಾಯಿಯವರ ಜಯಂತಿ ನಗರದ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಿನ್ನೆ ವೀರ ವೈರಾಗಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
ಪ್ರಾರಂಭದಲ್ಲಿ ವಿಶ್ವಗುರು ಬಸವಣ್ಣನವರ ಮತ್ತು ಅಕ್ಕಮಹಾದೇವಿ ತಾಯಿಯವರ ಹಾಗೂ ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ವಿದ್ಯಾನಗರದ ಅಕ್ಕನ ಬಳಗದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಪ್ರೊ. ಉಮಕಾಂತ ಮೀಸೆಯವರು ವೀರ ವೈರಾಗಿ ಅಕ್ಕಮಹಾದೇವಿ ತಾಯಿಯವರ ಆಧ್ಯಾತ್ಮಿಕ ಮತ್ತು ಸಾಹಿತ್ಯಕ ಚಿಂತನೆ ಕುರಿತು ವಿಚಾರ ಮಂಡಿಸುತ್ತಾ ಜಗತ್ತಿನ ಶ್ರೇಷ್ಠ ಕವಿಯತ್ರಿಯವರಲ್ಲಿ ಅಕ್ಕರವರಾಗಿದ್ದರು. ಕನ್ನಡ ಸಾಹಿತ್ಯದ ಪ್ರಪ್ರಥಮ ಮಹಿಳಾ ಕವಿಯತ್ರಿಯವರಾಗಿದ್ದರು. ಅವರ ನುಡಿಯಲ್ಲಿ ‘ಹೆದರದಿರು ಮನವೇ ಬೆದರದಿರುವ ತನುವೇ ನಿಜವನರಿದು ನಿಶ್ಚಂತನಾಗಿರು’ ಎನ್ನುವುದರಲ್ಲಿ ಜಗದ ಜನರಿಗೆ ಆತ್ಮಸ್ಥೈಯ್ರ್ಯ ಆತ್ಮವಿಶ್ವಾಸದಿಂದ ಸತ್ಯದ ಮಾರ್ಗದಿಂದ ನಡೆದು ಸಮಧಾನದಿಂದ ಬದುಕು ಸಾಗಲು ಸಂದೇಶ ನೀಡಿದ್ದಾರೆ. ಮುಂದುವರೆಯುತ್ತಾ ಮಾತನಾಡುತ್ತಾ 12ನೇ ಶತಮಾನದಲ್ಲಿ ಆಧ್ಯಾತ್ಮಿಕತೆಯ ಮೇರು ವ್ಯಕ್ತಿತ್ವವನ್ನು ಹೊಂದಿದವರು ಅಕ್ಕನವರಾಗಿದ್ದರು.
ಅಕ್ಕನ ಆಧ್ಯಾತ್ಮಿಕ ಸಾಹಿತ್ಯ ಸೃಜನ ಶೀಲತೆ ಮತ್ತು ಅನುಭಾವದ ಅರಿವಿನ ಮಹಾ ಬೆಳಗು ಆಗಿತ್ತು. ಭೌತಿಕ ಬದುಕು ನಶ್ವರವಾದುದು ಆಧ್ಯಾತ್ಮಿಕ ಬದುಕು ಪರಮಸುಖ ಕೊಡುವದಾಗಿದೆ ಎಂದು ತಮ್ಮ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಬಸವಣ್ಣನವರು 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯತೆ, ಸಾಮಾಜಿಕತೆ, ವೈಚಾರಿಕತೆ, ಕ್ರಾಂತಿಯು ವಿಶ್ವಕ್ಕೆ ಮಾರ್ಗದರ್ಶನವಾಗಿದೆ ಎಂದು ವಿಷಯ ಪ್ರತಿಪಾದಿಸಿದರು.
ಪ್ರಸಾದ ನಿಲಯದ ವ್ಯವಸ್ಥಾಪಕರಾದ ಶ್ರೀಕಾಂತ ಸ್ವಾಮಿ ಸ್ವಾಗತಕೋರಿದರೆ, ಶರಣೆ ಅಂಬಿಕಾ ನೌಬಾದೆ ನಿರೂಪಿಸಿದರೆ, ಶರಣೆ ಮೀನಾಕ್ಷಿ ಪಾಟೀಲ ವಂದಿಸಿದರು. ಅಕ್ಕನ ಬಳಗದ ಹಿರಿಯರಾದ ಕಸ್ತೂರಿ ಬಾಯಿ ಬಿರಾದಾರ, ಪ್ರೇಮಾ ಮುಚಳಂಬೆ, ಸವಿತಾ ಗಂದಿಗುಡೆ, ಕಾವೇರಿ ಕೋಟೆ, ರುಕ್ಮೀಣಿ, ಜಗದೇವಿ ನಾಗರಾಳ, ಲಕ್ಷ್ಮಿ ಬಾಯಿ ಅಲ್ಲೂರು ಸಿರಸಿ, ಮಹಾನಂದಾ ಸ್ವಾಮಿ, ಡಾ|| ವೈಜಿನಾಥ ಬಿರಾದಾರ, ಚನ್ನಬಸಪ್ಪಾ ನೌಬಾದೆ ಮುಂತಾದವರು ಉಪಸ್ಥಿತರಿದ್ದರು.