ಪಟ್ಟದ್ದೇವರು ಆದರ್ಶ ಗುರು: ಜಯರಾಜ ಖಂಡ್ರೆ

ಬೀದರ:ಎ.23: ಚನ್ನಬಸವ ಪಟ್ಟದ್ದೇವರು ಆದರ್ಶ ಗುರುವಾಗಿದ್ದರು ಎಂದು ಉದ್ಯಮಿ ಜೈರಾಜ್ ಖಂಡ್ರೆ ನುಡಿದರು.

ಇಲ್ಲಿಯ ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ನಡೆದ ಚನ್ನಬಸವ ಪಟ್ಟದ್ದೇವರ 22ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಕ, ದಾಸೋಹ ಸೇರಿದಂತೆ ಬಸವಾದಿ ಶರಣರ ತತ್ವಗಳನ್ನು ಜೀವನದುದ್ದಕ್ಕೂ ಚಾಚೂತಪ್ಪದೇ ಪಾಲಿಸಿಕೊಂಡು ಬಂದಿದ್ದರು ಎಂದು ತಿಳಿಸಿದರು.

ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಮಾತನಾಡಿ, ಪಟ್ಟದ್ದೇವರು ನಿಜಾಮನ ಆಳ್ವಿಕೆಯಲ್ಲಿ ಹೊರಗೆ ಉರ್ದು ಫಲಕ ಹಾಕಿ ಒಳಗೆ ಕನ್ನಡ ಕಲಿಸಿದ್ದರು ಎಂದು ಸ್ಮರಿಸಿದರು.

ಪ್ರೊ. ಉಮಾಕಾಂತ ಮೀಸೆ ಮಾತನಾಡಿ, ಪಟ್ಟದ್ದೇವರ ನಡೆ-ನುಡಿ ಒಂದೇ ಆಗಿತ್ತು. ಅಸಂಖ್ಯಾತ ಬಡ ಮಕ್ಕಳಿಗೆ ಅವರು ಅನ್ನ, ಅಕ್ಷರ ದಾಸೋಹ ಮಾಡಿದ್ದರು ಎಂದು ಹೇಳಿದರು.ಶಾಂತಾ ಖಂಡ್ರೆ ಅವರು ಬಸವಣ್ಣ ಹಾಗೂ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಶಾಮರಾವ್ ಡೊಂಗರಗೆ, ಗೀತಾ ಶಾಂತಕುಮಾರ, ಬಂಡೆಪ್ಪ ಗುನ್ನಳ್ಳಿ, ಶಿವಶಂಕರ, ಅಶೋಕ, ಶ್ರೀನಿವಾಸ ಬಚ್ಚಾ, ಸತ್ಯನಾರಾಯಣ ಇದ್ದರು. ಶ್ರೀಕಾಂತ ಸ್ವಾಮಿ ನಿರೂಪಿಸಿದರು.