ಪಟ್ಟಣ ಸ್ವಚ್ಚಗೊಳಿಸಿದವರಿಗಿಲ್ಲ ಸಂಬಳ : ಸಿದ್ರಾಮ ಕಟ್ಟಿ

ಜೇವರ್ಗಿ:ಅ.13: ಪಟ್ಟಣದಲ್ಲಿ 26 ಪೌರ ಕಾರ್ಮಿಕರು ಹೊರಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿರುವರ 6 ರಿಂದ 18 ತಿಂಗಳುಗಳ ವೇತನ ನೀಡಿಲ್ಲ. ಪಟ್ಟಣವನ್ನು ಸ್ವಚ್ಚಗೊಳಿಸಿದವರಿಗೆ ಯಾಕಿಲ್ ಸಂಬಳ ಇ.ಪಿ.ಎಫ್. ಹಾಗೂ ಇ.ಎಸ್.ಐ ನೀಡುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಯೋಜಕ ಸಿದ್ರಾಮ್ ಕಟ್ಟಿ ಆಗ್ರಹಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಮಿನಿ ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನೆ ಮೂಲಕ ಪುರಸಭೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಾಕಿ ವೇತನ ಮತ್ತು ಮೂಲ ಸೌಲಭ್ಯ ಒದಗಿಸಬೇಕೆಂದು ಮನವಿ ಸಲ್ಲಿಸಿದರು.

ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಇಲ್ಲಿಯವರೆಗೆ ಬಾಕಿ ವೇತನ ಮತ್ತು ಮೂಲ ಸೌಲಭ್ಯ ದೊರಕಿಲ್ಲ. ಮುಲ ಸೌಲಭ್ಯಗಳನ್ನ ಒದಗಿಸದ ಮುಖ್ಯಾಧಿಕಾರಿಗಳ ಮೇಲೆ ಕ್ರಮ ವಹಿಸಬೇಕು. ಹೊರಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 29 ಜನರ 6 ರಿಂದ 18 ತಿಂಗಳುಗಳ ವೇತನವನ್ನು ವಿಳಂಬ ಮಾಡದೆ ಒಂದು ವಾರದೊಳಗೆ ನೀಡಬೇಕು. ಪಟ್ಟಣದ ಸೌಂಧರ್ಯವನ್ನು ಕಾಪಾಡುವ ಪೌರಕಾರ್ಮಿಕರಿಗೆ ಸಂಬಳ ನೀಡದಿರುವುದು ವಿಪರ್ಯಾಸ ಎಂದರು.

ನಂತರ ಸಿದ್ದು ಮೈಂದ್ರಗಿ ಮಾತನಾಡಿ ಹೊರಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕೈತುಂಬ ದುಡಿಮೇಯಿದೆ ಆದರೆ ಸಂಬಳವಿಲ್ಲ. ಇವರನ್ನ ಕೇವಲ ದುಡಿಮೆಯ ಯಂತ್ರದಂತೆ ಪುರಸಭೆ ಬಳಸಿಕೊಳ್ಳುತ್ತಿದೆ. ತಕ್ಷಣವೆ ಎಚ್ಚೆತ್ತು ಬಾಕಿ ವೇತನ ನೀಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರವಿ ಕುಳಗೇರಿ, ಶ್ರೀಹರಿ ಕರ್ಕಿಹಳ್ಳಿ, ಸಿದ್ದು ಕೆರುರ, ವಿಶ್ವಾರಾಧ್ಯ ಗೋಪಾಲಕರ್, ಅಬ್ದುಲ ಗಾನಿ ರಾವಣ, ಪರಮಾನಂದ ಯಲಗೊಡ್, ರಮೇಶ್ ಪತ್ತಾರ, ಸಂಗು ಕಟ್ಟಿಸಂಗಾವಿ, ಮಿಲಿಂದ ಸಾಗರ, ಸಿದ್ದು ಅಂಕುಶ್ ದೊಡ್ಡಿ, ಪೌರಕಾರ್ಮಿಕರಾದ ಮಲ್ಲಿನಾಥ ಹೇಗಡೆ, ದಾವಲಸಾಬ್, ಪ್ರಭುಲಿಂಗಯ್ಯ, ಮನ್ಸುರ್, ಶಿವಕುಮಾರ, ಅಭಿಷೇಕ, ಗೀರಿಶ, ಮಲ್ಲಪ್ಪ, ಭಗವಾನ್, ಶಿವಪ್ಪ, ಧರ್ಮರಾಜ ಸೇರದಿಂತ ಇನ್ನಿತರರು ಉಪಸ್ಥಿತರಿದ್ದರು.