ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.16: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಎ. ನಸುರುಲ್ಲಾ ಹಾಗೂ ಸಿಬ್ಬಂದಿಯವರ ವತಿಯಿಂದ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸ್ವ ಸಹಾಯ ಸಂಘ ಮಹಿಳೆಯರು, ವಿವಿಧ ಅಂಗಡಿ ಮಾಲೀಕರನ್ನು ಸಭೆ ನಡೆಸಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಪ್ಲಾಸ್ಟಿಕ್ ಮುಕ್ತ, ಸುಂದರ ಸ್ವಚ್ಛ ಪಟ್ಟಣವಾಗಿಸಲು ವ್ಯಾಪಾರಸ್ಥರಲ್ಲಿ ಪ್ರತಿಜ್ಞೆಯನ್ನು ಮೂಡಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಹರಪನಹಳ್ಳಿ ಪುರಸಭೆಯ ಪರಿಸರ ಅಭಿಯಂತರಾದ ಅಂಬರೀಶ್ ಮಾತಾನಾಡಿ ಇಡೀ ರಾಜ್ಯದಲ್ಲೇ ಪ್ಲಾಸ್ಟಿಕ್ ಬಳಕೆಗಳನ್ನು ಉಪಯೋಗಿಸದಂತೆ ಸರ್ಕಾರ ಆದೇಶ ಮಾಡಿದರು ಕೂಡ ಕೆಲ ಅಂಗಡಿ ಮಾಲೀಕರು ಬೀದಿ ಬದಿ ವ್ಯಾಪಾರಸ್ಥರು ಬಳಕೆಯಿಂದ ಪಟ್ಟಣದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಉಂಟಾಗುತ್ತದೆ ಇದರಿಂದಾಗುವ ಪರಿಣಾಮಗಳು ಅತ್ಯಂತ ಮಾರಕ ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆಯನ್ನು ಪಟ್ಟಣದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಅಂಗಡಿ ಮಾಲೀಕರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಲ್ಲಿ ದಂಡ ವಸೂಲಿ ಮಾಡಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮುಖ್ಯಧಿಕಾರಿ ಎ. ನಾಸಾರುಲ್ಲಾ ರವರು ತಿಳಿಸಿದರು
ಈ ಸಂದರ್ಭದಲ್ಲಿ , ಹಿರಿಯ ಆರೋಗ್ಯ ನಿರೀಕ್ಷಕರು ಅನುಷಾ, ಕಿರಿಯ ಅಭಿಯಂತರಾದ ನಿಹಾರಿಕ, ಹಾಗೂ ಪಟ್ಟಣ ಪಂಚಾಯ್ತಿ ಸಿಬ್ಬಂದಿ ವರ್ಗದವರು ಇದ್ದರು