ಪಟ್ಟಣ ಪಂಚಾಯತ್ ಕಚೇರಿಯಲ್ಲಿ ’ಗೃಹಲಕ್ಷ್ಮೀ’ ನೊಂದಣಿ ಪ್ರಾರಂಭ

ಸಿರವಾರ,ಜು.೨೮-
ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ’ಗೃಹ ಲಕ್ಷ್ಮೀ’ ಯೋಜನೆಯ ನೊಂದಣಿಯನ್ನು ವೈಎಜಿ ಕಾಲೋನಿಯಲ್ಲಿರುವ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಾರಂಭಿಸಲಾಗಿದೆ.
ಈ ಮೊದಲು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಗೃಹ ಲಕ್ಷ್ಮೀ ಯೋಜನೆಯ ನೊಂದಣಿ ಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲೂ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಪಟ್ಟಣದ ಸಾರ್ವಜನಿಕರು ಕೇಂದ್ರದ ಸದುಪಯೋಗ ಪಡಿಸಿಕೊಳ್ಳಲು ಪಟ್ಟಣ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.