ಪಟ್ಟಣ ಪಂಚಾಯತಿಯಿಂದ ಮತದಾನ ಜಾಗೃತಿ ಜಾಥ

ಸಿರವಾರ,ಏ.೧೫- ಭವ್ಯ ಭಾರತದಲ್ಲಿ ಹಕ್ಕುಗಳನ್ನು ಸ್ವಾತಂತ್ರ್ಯವನ್ನು ಹೇಗೆ ನೀಡಿದ್ದಾರೋ ಅದರಂತೆ ಮತದಾನದ ಕರ್ತವ್ಯವನ್ನು ಸಹ ನೀಡಿದೆ, ಮತದಾನ ಪವಿತ್ರ ಕಾರ್ಯವಾಗಿದೆ ಎಂದು ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಹೇಳಿದರು.
ಪಟ್ಟಣ ಪಂಚಾಯತಿ ಹಳೆ ಕಟ್ಟಡದ ಮುಂದೆ ಇಂದು ಬೆಳಗ್ಗೆ ೨೦೨೩ ರ ವಿದಾನಸಭಾ ಚುನಾವಣೆಯ ಅಂಗವಾಗಿ ಮತದಾನದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ೧೮ ವರ್ಷ ತುಂಬಿದ ಪ್ರತಿಯೊಬ್ಬ ಸ್ತ್ರೀ- ಪುರುಷ, ತೃತೀಯ ಲಿಂಗದವರು ಮತದಾನ ಮಾಡಲು ಅರ್ಹರಾಗಿದ್ದಾರೆ. ಮತದಾನ ದಿನದಂದ ಚುನಾವಣೆಯಲ್ಲಿ ಸ್ಪರ್ದೇ ಮಾಡಿರುವ ಅಭ್ಯರ್ಥಿಗಾದರೂ, ಅಥವಾ ನೋಟಾಕಾದರೂ ಮತದಾನ ಮಾಡಿ ಒಟ್ಟಿನಲ್ಲಿ ಸಂವಿಧಾನ ನಮಗೆ ನೀಡಿರುವ ಕರ್ತವ್ಯಗಳನ್ನು ಮಾಡಬೇಕು. ಮತ ಮಾರಾಟ ಮಾಡುವ ವಸ್ತು ಅಲ, ನನ್ನ ಮತ ಮಾರಾಟ ಮಾಡುವುದಿಲ ಎಂಬ ಉದ್ಹಾರಣೆ ನಾಮಪಲಕವನ್ನು ಅಳವಡಿಸಿ. ಸುಭದ್ರ ಪ್ರಜಾ ಪ್ರಭುತ್ವ ಉಳಿಯಬೇಕಾದರೆ ಎಲ್ಲಾರೂ ಮೇ೧೦ ರಂದು ಕಡ್ಡಾಯವಾಗಿ ಮತದಾನ ಮಾಡೊಣ ಎಂದರು.
ಪಂಚಾಯತಿಯಿಂದ ಬಸವೇಶ್ವರ ಕ್ರಾಸ್‌ನಿಂದ ಬಸ್ ನಿಲ್ದಾಣಕ್ಕೆ ಮುಖ್ತಾಯವಸಯಿಈ. ಸಂದರ್ಭದಲ್ಲಿ ಸುಮುದಾಯ ಸಂಘಟನಾಧಿಕಾರಿ ಹಂಪಯ್ಯಪಾಟೀಲ್, ಸಿಬ್ಬಂದಿಗಳಾದ ಲಕ್ಷ್ಮಿ,ಪದ್ಮಾ, ಸುನೀತಾ, ಶರಣಬಸವ, ಸಚೀನ್ ಚ್ಯಾಗಿ, ವಿರೇಶ ನೇಕಾರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.