ಪಟ್ಟಣ ಪಂಚಾಯತಿಯಲ್ಲಿ ಸರಳವಾಗಿ ಕಾರ್ಮಿಕರ ದಿನಾಚರಣೆ

ಸಿರವಾರ.ಮೇ೧- ಮೇ ೧ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣ ಪಂಚಾಯತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಪ.ಪಂ ಮುಖ್ಯಾದಿಕಾರಿ ಕೆ.ಮುನಿಸ್ವಾಮಿ ಮಾತನಾಡಿದ ಕಾರ್ಮಿಕರಿದ್ದರೆ ನಾವು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾದ್ಯ. ನೀವು ಚೆನ್ನಾಗಿ ಕೆಲಸ ಮಾಡಿದರೆ ಪಂಚಾಯತಿಗೆ ನಮಗೆ ಹೆಸರು ಬರುತ್ತದೆ. ಈಗಾಗಲೇ ನಿಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಢುತ್ತಿದ್ದಿರಿ, ಇನ್ನೂ ಮುಂದೆಯೂ ಸಹ ಇದೇ ರೀತಿ ಮಾಡಿ. ಆರೋಗ್ಯದ ಬಗ್ಗೆ ಎಚರಿಕೆ ಇರಲಿ. ಇಲಿಯವರೆಗೂ ಬಹುತೇಕ ಎಲ್ಲಾರ ವೇತನ ಪಾವತಿಯಾಗಿದೆ ಎಂದರು.
ಅಧ್ಯಕ್ಷೆಯ ಪತಿ ಗುರುನಾಥ ರೇಡ್ಡಿ, ಸದಸ್ಯ ಇರ್ಫಾನ ಬಢೇಗರ್, ಸಿಬ್ಬಂದಿಗಳಾದ ಶರಣಬಸವ, ಸಚೀನ್ ಚ್ಯಾಗಿ, ವಿರೇಶ ನೇಕಾರ ಸೇರದಂತೆ ಸಿಬ್ಬಂದಿವರ್ಗ ಇದ್ದರು.